More

    ಫುಟ್ಬಾಲ್ ಆಟಗಾರ ಲಿಯೋನೆಲ್​ ಮೆಸ್ಸಿ ಬಳಸುವ ಕರೊನಾ ವೈರಾಣು ನಿರೋಧಕ ಹಾಸಿಗೆಯ ಬೆಲೆ ಕೇಳಿದರೆ ಎದೆ ನಡುಗುತ್ತೆ

    ನವದೆಹಲಿ: ಬಾರ್ಸಿಲೋನಾ ಫುಟ್​ಬಾಲ್​ ತಂಡದ ನಾಯಕ ಹಾಗೂ ವಿಶ್ವದಲ್ಲೇ ಅತಿಹೆಚ್ಚು ಶುಲ್ಕ ಪಡೆದುಕೊಳ್ಳುವ ಆಟಗಾರ ಲಿಯೋನೆಲ್​ ಮೆಸ್ಸಿ ಕರೊನಾ ವೈರಾಣು ಸೋಂಕಿನಿಂದ ದೂರುವುಳಿಯಲು ತಮಗೆ ಹಾಗೂ ತಮ್ಮ ಕುಟುಂಬವರ್ಗದವರಿಗಾಗಿ ವಿಶೇಷವಾದ ಹಾಸಿಗೆಯನ್ನು ಖರೀದಿಸಿದ್ದಾರೆ. ಇದರ ಬೆಲೆ ಕೇವಲ 88 ಸಾವಿರ ರೂ. ಎಂದು ಹೇಳಲಾಗುತ್ತಿದೆ.

    ಇತರೆ ಫುಟ್ಬಾಲ್​ ಆಟಗಾರರಂತೆ ಕೋವಿಡ್​-19 ಪಿಡುಗಿನ ಸಂದರ್ಭದಲ್ಲಿ ಲಿಯೋನೆಲ್​ ಮೆಸ್ಸಿ ಕೂಡ ತಮ್ಮ ಹಾಗೂ ತಮ್ಮ ಕುಟುಂಬದವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಳೆದ ಜುಲೈನಿಂದ ಪುಟ್ಬಾಲ್​ ಪಂದ್ಯಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮೆಸ್ಸಿ ಕೂಡ ತಮ್ಮ ಕಾಲ್ಚಳಕ ತೋರಲು ಮೈದಾನಕ್ಕೆ ಇಳಿಯಲಾರಂಭಿಸಿದ್ದಾರೆ. ಹೀಗಿರುವಾಗ ತಮ್ಮ ಹಾಗೂ ತಮ್ಮವರ ಸುರಕ್ಷತೆಗಾಗಿ ಮೆಸ್ಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

    ಇದನ್ನೂ ಓದಿ: ಡ್ರಗ್ಸ್​ ಪೆಡ್ಲರ್ಸ್ ವಿರುದ್ಧ ಸಿಸಿಬಿ ಸಮರ, ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರ ಬಂಧನ

    ಈ ಹಿನ್ನೆಲೆಯಲ್ಲಿ ಅವರು 88 ಸಾವಿರ ರೂ. ಮೌಲ್ಯದ ಹಾಸಿಗೆಯನ್ನು ಖರೀದಿಸಿದ್ದಾರೆ. ಟೆಕ್​ ಮೂನ್​ ಎಂಬ ಕಂಪನಿ ಈ ಕೋವಿಡ್​ ಹಾಸಿಗೆಯನ್ನು ತಯಾರಿಸುತ್ತಿದೆ. ಈ ಹಾಸಿಗೆಯ ಮೇಲೆ ನಾಲ್ಕು ತಾಸು ಮಲಗಿದರೆ ವ್ಯಕ್ತಿಯ ದೇಹದಲ್ಲಿರುವ ಕೋವಿಡ್​-19 ವೈರಾಣು ಅಲ್ಲದೆ, ಎಲ್ಲ ಬಗೆಯ ವೈರಾಣುಗಳನ್ನು ಸ್ವಚ್ಛಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.

    ಈ ಹಾಸಿಗೆಯಲ್ಲಿ ವೈರುಕ್ಲೀನ್​ ಎಂಬ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಹಾಸಿಗೆಯ ಪ್ರತಿಯೊಂದು ಎಳೆಗಳಲ್ಲಿ ನ್ಯಾಯೋಪಾರ್ಟಿಕಲ್ಸ್​ ಅನ್ನು ಅಳವಡಿಸಲಾಗಿದ್ದು, ಶೇ.99 ವೈರಾಣುಗಳು ಮತ್ತು ಅಪಾಯಕಾರಿ ಕೀಟಾಣುಗಳನ್ನು ಸ್ವಚ್ಛಗೊಳಿಸುತ್ತದೆ ಎಂದು ವಿವರಿಸಲಾಗಿದೆ.

    ಫುಟ್ಬಾಲ್​ ಒಂದು ತಂಡ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಆಟಗಾರರು ಪರಸ್ಪರ ಮೈಕೈ ತಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಪಂದ್ಯಕ್ಕೂ ಮುನ್ನ ಆಟಗಾರರ ಆರೋಗ್ಯವನ್ನು ಆಮೂಲಾಗ್ರವಾಗಿ ಪರಿಶೀಲಿಸಲಾಗುತ್ತದೆ. ಕೋವಿಡ್​-19 ಟೆಸ್ಟ್​ಗಳನ್ನು ಕಡ್ಡಾಯವಾಗಿ ಮಾಡಿಸಲಾಗುತ್ತದೆ. ಇದರ ಜತೆಗೆ ಮೆಸ್ಸಿ ತಮ್ಮ ಹಾಗೂ ತಮ್ಮ ಕುಟುಂಬ ವರ್ಗದವರ ಹೆಚ್ಚುವರಿ ಸುರಕ್ಷತೆಗಾಗಿ ಕೋವಿಡ್​-19 ನಿರೋಧಕ ಹಾಸಿಗೆಯನ್ನು ಬಳಸುತ್ತಿದ್ದಾರೆ.

    ಶಾಂತಿ ಮಂತ್ರ ಪಠನೆ ಆರಂಭಿಸಿದ ಚೀನಾ; ಎರಡೂ ರಾಷ್ಟ್ರಗಳಿಗೆ ಯುದ್ಧ ಇಷ್ಟವಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts