More

    ಅನಿರ್ಬಂಧಿತ ಅನುದಾನ ದುರ್ಬಳಕೆ- ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹ

    ಲಿಂಗಸುಗೂರು: ಸ್ಥಳೀಯ ತಾಪಂನ 2021-22 ನೇ ಸಾಲಿನ ಅನಿರ್ಬಂಧಿತ ಅನುದಾನ ಮತ್ತು 15 ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆಯಾಗಿದ್ದು, ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಎಸಿ ಕಚೇರಿ ತಹಸೀಲ್ದಾರ್ ಶಂಶಾಲಂಗೆ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

    ಈ ಯೋಜನೆಗಳಡಿ 2.01 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ ಶಿಕ್ಷಣ ಇಲಾಖೆಯ 27 ಕಾಮಗಾರಿಗಳಿಗೆ 45.53 ಲಕ್ಷ ರೂ. ರಸ್ತೆ ಅಭಿವೃದ್ಧಿಗೆ 40 ಲಕ್ಷ ರೂ., ಶಿಶು ಅಭಿವೃದ್ಧಿ ಯೋಜನೆಗೆ 61.10 ಲಕ್ಷ ರೂ., ಆರೋಗ್ಯ ಇಲಾಖೆ ಕಾಮಗಾರಿಗಳಿಗೆ 20.21 ಲಕ್ಷ ರೂ., ನೈರ್ಮಲ್ಯ ಕಾಮಗಾರಿಗೆ 23.82 ಲಕ್ಷ ರೂ., ಸಾಮಾಜಿಕ ಲೆಕ್ಕ ಪರಿಶೋಧನೆಗಾಗಿ 1 ಲಕ್ಷ ರೂ., ಅಂಗವಿಕಲರ ಕಲ್ಯಾಣ ಕಾರ್ಯಗಳಿಗೆ 10.08 ಲಕ್ಷ ರೂ. ಅನುದಾನ ನಿಗದಿಪಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.

    ಡುಯೆಲ್ ಡೆಸ್ಕ್ ಖರೀದಿ ಟೆಂಡರ್‌ನಲ್ಲಿ 7 ಜನ ಭಾಗವಹಿಸಿದ್ದರೂ, ತಮಗೆ ಬೇಕಾದವರಿಗೆ ಟೆಂಡರ್ ನೀಡುವ ಉದ್ಧೇಶದಿಂದ ಪ್ರಕ್ರಿಯೆ ರದ್ದುಪಡಿಸಿ ಮತ್ತೆ ಟೆಂಡರ್ ಕರೆದು ಡೆಸ್ಕ್ ಖರೀದಿಸಲಾಗಿದೆ. ಡೆಸ್ಕ್ ಖರೀದಿಗೆ ಯಾವುದೇ ಅಧಿಕೃತ ಬಿಲ್ ಇಲ್ಲ. ಆದರೆ, ತಾಪಂನಿಂದ 26,22,376 ರೂ. ಪಾವತಿಸಲಾಗಿದೆ. ನಾನಾ ಕಾಮಗಾರಿಗಳಲ್ಲಿ ಅವ್ಯವಹಾರ ಕಂಡು ಬಂದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ, ಅಕ್ರಂ ಪಾಷಾ, ಯಲ್ಲಪ್ಪ ಹಾಲಬಾವಿ, ಹುಸೇನಪ್ಪ ನಾಯಕ, ದುರುಗಪ್ಪ ಮೇಗಳಮನಿ, ಹುಸೇನಪ್ಪ, ಹನುಮೇಶ, ಹಾಜಿಬಾಬು ಕರಡಕಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts