More

    “ಪ್ರೀತಿಯ ಮುದ್ದು ಮಕ್ಕಳೇ ..” ವಿದ್ಯಾರ್ಥಿಗಳಿಗೆ ಪತ್ರ ಬರೆದು ಮನಗೆದ್ದ ಶಿಕ್ಷಕರು

    ಲಿಂಗಸುಗೂರು : ಲಾಕ್‌ಡೌನ್‌ನಿಂದಾಗಿ ಶಾಲೆಗಳು ಬಂದ್ ಆಗಿದ್ದು, ಮಕ್ಕಳ ಕಲಿಕೆ ಕುಂಠಿತಗೊಂಡಿದೆ. ಇಂತಹ ಸಂದರ್ಭದಲ್ಲಿ ರಾಯಚೂರಿನ ಕೆಸರಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳಿಗೆ ಪತ್ರ ಬರೆದು, ಕಲಿಕೆಗೆ ಉತ್ತೇಜಿಸುವ ಮೂಲಕ ಪಾಲಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ 195 ಮಕ್ಕಳಿಗೆ ಮುಖ್ಯಗುರು ರಾಚನಗೌಡ, ಹಿರಿಯ ಶಿಕ್ಷಕ ಚಂದ್ರಶೇಖರಪ್ಪ ಮತ್ತು ಸಹ ಶಿಕ್ಷಕರು ಅಕ್ಕರೆಯ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿದ್ದಾರೆ.

    ಪತ್ರದ ಸಾರಾಂಶ ಹೀಗಿದೆ: ಪ್ರೀತಿಯ ಮುದ್ದು ಮಕ್ಕಳೇ, ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದ್ದು ನೋವಾಗಿದೆ. ಆದರೆ, ಶಾಲಾರಂಭಕ್ಕೆ ಹಸಿರು ನಿಶಾನೆ ಸಿಕ್ಕಿರುವುದು ಸಂತೋಷವಾಗಿದೆ. ಅಲ್ಲಿವರೆಗೆ ಮನೆಯಲ್ಲೇ ಇದ್ದು, ಕುಟುಂಬದೊಂದಿಗೆ ಉತ್ತಮ ಆಹಾರ ಸೇವನೆ ಮಾಡಬೇಕು. ಯೋಗ, ವ್ಯಾಯಾಮ ಅಭ್ಯಾಸ ಮಾಡಿ. ರಜೆ ಇದ್ದರೂ ಬಿಸಿಯೂಟದ ಆಹಾರ ಸಾಮಗ್ರಿ ಪಡೆಯಬೇಕು. ಶಾಲೆಯಿಲ್ಲವೆಂದು ಕೊರಗದೆ ಕಲಿಕೆಗೆ ಉತ್ಸುಕರಾಗಿರಬೇಕು. ಆಫ್‌ಲೈನ್, ದೂರದರ್ಶನ, ಸಂವೇದಿ, ಬಾನುಲಿ, ಯೂಟ್ಯೂಬ್, ವಾಟ್ಸ್​ಆ್ಯಪ್, ಟ್ಯಾಬ್, ರೇಡಿಯೋ, ದೂರದರ್ಶನ ಮುಖೇನ ಕಲಿಕೆ ನಿರಂತರವಾಗಿರಲಿ. ಮುಗ್ಧ ಮನಸ್ಸಿನ ಹೂವುಗಳು ನೀವು. ತಂದೆ-ತಾಯಿಗಳ ಹೆಮ್ಮೆಯ ಮಕ್ಕಳಾಗಿ ಭಾರತದ ರತ್ನಗಳಾಗಿ, ಕರೊನಾದಿಂದ ಎಚ್ಚರ ವಹಿಸಿ ಎಂದು ಪತ್ರದಲ್ಲಿ ಶಿಕ್ಷಕರು ಧೈರ್ಯ ತುಂಬಿ, ಹಾರೈಸಿದ್ದಾರೆ.

    "ಪ್ರೀತಿಯ ಮುದ್ದು ಮಕ್ಕಳೇ .." ವಿದ್ಯಾರ್ಥಿಗಳಿಗೆ ಪತ್ರ ಬರೆದು ಮನಗೆದ್ದ ಶಿಕ್ಷಕರು

    ಪತ್ರ ಸಂಸ್ಕೃತಿ ಉಳಿಸಿ ಬೆಳೆಸುವ ಜತೆಗೆ ಮಕ್ಕಳಿಗೆ ಕರೊನಾ ಜಾಗೃತಿ ಮೂಡಿಸುವುದು, ಕಲಿಕೆಗೆ ಉತ್ತೇಜಿಸಲು ಅಂಚೆ ಮೂಲಕ ಪತ್ರ ಬರೆಯಲಾಗಿದೆ. ಮಕ್ಕಳ ಮತ್ತು ಶಿಕ್ಷಕರ ಮಧ್ಯೆ ಕಡಿತಗೊಂಡಿದ್ದ ಸಂಪರ್ಕ ಸಾಧ್ಯವಾಗಿದೆ.
    |
    ರಾಚನಗೌಡ, ಮುಖ್ಯಗುರು, ಸ.ಹಿ.ಪ್ರಾ.ಶಾಲೆ, ಕೆಸರಟ್ಟಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts