More

    ಅಮರೇಶ್ವರ ದರ್ಶನಕ್ಕೆ ಭಕ್ತರ ದೌಡು

    ಲಿಂಗಸುಗೂರು: ಹಿಂದು ಸಂಪ್ರದಾಯದಂತೆ ಶ್ರಾವಣ ಮಾಸದ ಕುಶಾಗ್ರಹಣಿ (ಬೆನಕನ) ಅಮವಾಸ್ಯೆಯು ಶನಿದೇವರ ಅಮಾವಾಸ್ಯೆ ಆಗಿರುವುದರಿಂದ ಇದನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಮರೇಶ್ವರ ಸುಕ್ಷೇತ್ರಕ್ಕೆ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮರೇಶ್ವರ ದರ್ಶನ ಪಡೆದರು.

    ಶ್ರಾವಣ ಮಾಸಾಂತ್ಯದ ಶನಿವಾರ ಬಂದಿರುವ ಕುಶಾಗ್ರಹಣಿ ಶನಿ ಅಮಾವಾಸ್ಯೆಯ ತಿಥಿಯನ್ನು ಪೂರ್ವಜರಿಗೆ ಸಮರ್ಪಿಸಲಾಗಿದ್ದು, ಶಾಸ್ತ್ರಗಳ ಪ್ರಕಾರ ಕುಶಾಗ್ರಹಣಿ ಅಥವಾ ಶ್ರಾವಣ ಅಮಾವಾಸ್ಯೆಯಂದು ಪೂರ್ವಜರನ್ನು ಮೆಚ್ಚಿಸಲು ಗಂಗಾಸ್ನಾನ, ದಾನ, ಶ್ರಾದ್ಧ, ಬಿಂಡದಾನವನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಸಾಂಸಾರಿಕ ಸುಖ, ನೆಮ್ಮದಿ ದೊರೆಯಲಿದೆ. ಆಚರಣೆಯಿಂದ ಮಹಾದೇವ ಮತ್ತು ಶನಿದೇವರ ವಿಶೇಷ ಅನುಗ್ರಹ ಪಡೆಯಬಹುದಾಗಿದೆ. ಶಿವಲಿಂಗಕ್ಕೆ ಜಲಾಭಿಷೇಕ, ಬಡವರಿಗೆ ಧನ, ಧಾನ್ಯ ಸಮರ್ಪಣೆಯಿಂದ ದುಃಖಗಳು ನಾಶವಾಗಲಿದೆ ಎಂಬ ನಂಬಿಕೆಯಿದೆ.

    ಹೀಗಾಗಿ ಭಕ್ತರು ಮಠ, ಮಂದಿರಗಳು, ತೀರ್ಥ ಕ್ಷೇತ್ರಗಳಿಗೆ ತೆರಳಿ ದೇವರ ಮತ್ತು ಗುರುಗಳ ದರ್ಶನ ಪಡೆಯುವುದು ಸಾಮಾನ್ಯವಾಗಿದೆ. ಅದರಂತೆ ಸುಕ್ಷೇತ್ರ ಅಮರೇಶ್ವರಕ್ಕೆ ಆಗಮಿಸಿ ಹೊಂಡದಲ್ಲಿ ಪುಣ್ಯಸ್ನಾನ ಮಾಡಿ, ಕಾಯಿ ಕರ್ಪೂರ ಅರ್ಪಿಸಿ ಸರದಿ ಸಾಲಿನಲ್ಲಿ ನಿಂತು ಅಮರೇಶ್ವರ ದೇವರು ಮತ್ತು ಅಮರೇಶ್ವರ ಅಭಿನವ ಗುರುಗಜದಂಡ ಸ್ವಾಮೀಜಿಗಳ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts