More

    ಯುಗಪುರುಷರಿಂದ ಶ್ರೀಮಂತಿಕೆ ಪಡೆದ ಭಾಷೆ

    ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಅನಿಸಿಕೆ ಕರವೇಯಿಂದ ಐಕ್ಯತಾ ಸಮಾವೇಶ

    ಲಿಂಗಸುಗೂರು: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಯುಗಪುರುಷರಾದಿಯಾಗಿ ಅನೇಕ ವಿದ್ವಾಂಸರಿಂದ ಶ್ರೀಮಂತಿಕೆ ಪಡೆದಿದೆ ಎಂದು ಬೈಲೂರು ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ (ನಾರಾಯಣಗೌಡ ಬಣ) ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಆಯೋಜಿಸಿದ್ದ ಐಕ್ಯತಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಈ ಹಿಂದೆ ಕಾವೇರಿಯಿಂದ ಗೋದಾವರಿ ತೀರದವರೆಗೆ ಕನ್ನಡಿಗರ ಪ್ರಾಂತ್ಯ ಇತ್ತು ಎಂದರು.

    ಬಸವಾದಿ ಶರಣರ ಅನುಭವ ಮಂಟಪ ಪ್ರಜಾಪ್ರಭುತ್ವದ ತಳಹದಿಯ ಪರಿಕಲ್ಪನೆಯಾಗಿದೆ. ಪಂಪ, ರನ್ನ, ಆದಿ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಅಮರ ಗಣಗಂಗಳು, ವಚನಕಾರರು, ಪುರಂದರ ದಾಸರು, ಕನಕದಾಸರು, ಸರ್ವಜ್ಞ, ಕೃಷ್ಣದೇವರಾಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಮದಕರಿ ನಾಯಕ, ರಾಜಾ ವೆಂಕಟಪ್ಪ ನಾಯಕ, ವಿಶ್ವೇಶ್ವರಯ್ಯ ಕನ್ನಡ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ.

    ಸಾಹಿತ್ಯ, ಸಂಗೀತ, ಕಲೆಯಿಂದ ಕನ್ನಡ ಭಾಷೆ ಶ್ರೀಮಂತಿಕೆ ಪಡೆದಿದೆ. ಇಂತಹ ಭಾಷೆ ನಾಡಿನ ಪ್ರತಿಯೊಬ್ಬ ಕನ್ನಡಿಗರ ಉಸಿರಾಗಬೇಕು. ಜಾತಿ, ಧರ್ಮ, ಮತ ಭೇದ ಮರೆತು ಐಕ್ಯತೆಯಿಂದ ಎಲ್ಲರೂ ಬದುಕಬೇಕೆಂದು ಸ್ವಾಮೀಜಿ ಹೇಳಿದರು. ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿ, ಕನ್ನಡ ನಾಡು, ನುಡಿ, ಜಲ ಉಳಿಸಿ ಬೆಳೆಸುವಲ್ಲಿ ಕನ್ನಡ ಪರ ಸಂಘಟನೆಗಳ ಕೊಡುಗೆ ಅಪಾರವಾಗಿದೆ. ಅಖಂಡ ಕರ್ನಾಟಕ ಉಳಿವಿಗೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts