More

    ಕೌಶಲದಿಂದ ಸ್ವಾವಲಂಬಿ ಬದುಕು ಸಾಧ್ಯ; ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ ಅನಿಸಿಕೆ

    ಅಮರೇಶಸ್ವಾಮಿ ಬಲ್ಲಟಗಿ
    ಆಯ್ದಕ್ಕಿ ಲಕ್ಕಮ್ಮ ವೇದಿಕೆ ಲಿಂಗಸುಗೂರು: ನಾಡಿನ ಜನರ ಭಾವನೆಗಳು, ಆಸಕ್ತಿ ಮತ್ತು ಬೇಕು-ಬೇಡಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕಿತ್ತು ಎಂದು ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ ಹೇಳಿದರು.

    ಪಟ್ಟಣದ ಸ.ಪ.ಪೂ.ಕಾಲೇಜು ಮೈದಾನದಲ್ಲಿ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಕೀರ್ಣ ಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಜಾಗತೀಕರಣ ಮತ್ತು ಖಾಸಗೀಕರಣದಿಂದ ಶಿಕ್ಷಣದ ನೀತಿಯಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ. ವೃತ್ತಿ ಕೌಶಲ ಮತ್ತು ಆಸಕ್ತಿಯ ಶಿಕ್ಷಣದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

    ವಲಸೆ ಹೋಗುವುದು ಸ್ಥಳೀಯವಾಗಿರದೆ, ಉನ್ನತ ಶಿಕ್ಷಣ ಪಡೆದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಸ್ಥಳೀಯವಾಗಿ ಮೂಲ ಸೌಲಭ್ಯದ ಕೊರತೆ, ಸೂಕ್ತ ಗೌರವ ಇಲ್ಲದಿರುವುದು ಮತ್ತು ವೃತ್ತಿಗೆ ತಕ್ಕಂತೆ ಸೇರಿ ಅನೇಕ ಕಾರಣಗಳಿವೆ. ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಪ್ರಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts