More

    ಅಂತರ್ಜಲ ಸಂರಕ್ಷಣೆಯೇ ಪ್ರಮುಖ ಗುರಿ- ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ವಾಣಿಶ್ರೀ

    ಲಿಂಗಸುಗೂರು: ಜೀವ ಸಂಕುಲಕ್ಕೆ ನೀರು ಬಹುಮುಖ್ಯ. ಅದೃಶ್ಯವಾಗುತ್ತಿರುವ ಅಂತರ್ಜಲವನ್ನು ಕಾಣುವಂತೆ ಮಾಡುವ ಸಂಕಲ್ಪ ಈ ವರ್ಷದ ಧ್ಯೇಯವಾಕ್ಯ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಹೇಳಿದರು.

    ಸ್ಥಳೀಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜಲದಿನಾಚರಣೆಯಲ್ಲಿ ಮಾತನಾಡಿ, ಅಂತರ್ಜಲ ಬಳಕೆಯ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮುಖ್ಯ. ಕೃಷಿಗೆ ಬಳಸಲು ನೀರು ಅತ್ಯವಶ್ಯಕ. ರೈತರು ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಗಮನ ಹರಿಸಬೇಕು. ಫ್ಲೋರೈಡ್ ಅಂಶವುಳ್ಳ ನೀರು ಸೇವನೆ ಹಲವು ಕಾಯಿಲೆಗಳ ಮೂಲ ಎಂದರು.

    ಕೇಂದ್ರದ ನಿವೃತ್ತ ಮುಖ್ಯಸ್ಥ ಡಾ.ಎಸ್.ಎನ್.ಉಪ್ಪೇರಿ ಮಾತನಾಡಿ, ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡಬೇಕಿದೆ. ಅಂತರ್ಜಲ ಮರುಪೂರಣಕ್ಕೆ ಕೆರೆ, ಕೊಳ್ಳಗಳು ಅವಶ್ಯ. ಕೆರೆ, ಕೃಷಿ ಹೊಂಡಗಳನ್ನು ನಿರ್ಮಿಸುವತ್ತ ರೈತರು ಆಸಕ್ತಿ ತೋರಬೇಕೆಂದು ಹೇಳಿದರು.

    ಕೇಂದ್ರದ ವಿಜ್ಞಾನಿಗಳಾದ ಅರವಿಂದ್ ರಾಥೋಡ್, ಕೆ.ಜಿ.ಬಿಂದು, ರೈತ ಮುಖಂಡರಾದ ಶರಣಗೌಡ ಬಸ್ಸಾಪುರ, ಬಾಬಣ್ಣ ಆನ್ವರಿ, ರಮೇಶ ಶಾಸ್ತ್ರಿ, ದೊಡ್ಡಬಸಪ್ಪ ಉಪ್ಪೇರಿ, ರಾಚಣ್ಣ ನೀರಲಕೇರಿ, ಆದಪ್ಪ ಸುಲ್ತಾನಪುರ, ತಿಮ್ಮನಗೌಡ ಹಟ್ಟಿ, ದೇವರಡ್ಡಿ ಈಚನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts