More

    ದ್ವಾದಶ ಪೀಠಾರೋಹಣ ಮಹೋತ್ಸವ ಯಶಸ್ವಿಗೊಳಿಸಿ, ಶ್ರೀಶೈಲ ಜಗದ್ಗುರುಗಳ ಹೇಳಿಕೆ

    ಲಿಂಗಸುಗೂರು: ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ತು ಜನ್ಮಸುವರ್ಣ ಮಹೋತ್ಸವ ನಿಮಿತ್ತ ನಾನಾ ಧಾರ್ಮಿಕ, ಸಾಮಾಜಿಕ ಮತ್ತು ಜನ ಜಾಗೃತಿ ಪಾದಯಾತ್ರೆ ಆಯೋಜಿಸಿದ್ದು, ಯಶಸ್ಸಿಗೆ ಭಕ್ತರು ಸಹಕಾರ ನೀಡಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಜನಜಾಗೃತಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀಶೈಲ ಸಮಂ ಕ್ಷೇತ್ರಂ ನ ಭೂತೋ ನ ಭವಿಷ್ಯತಿ ಎಂಬ ಉಕ್ತಿಯಂತೆ ಶ್ರೀಶೈಲ ಕ್ಷೇತ್ರಕ್ಕೆ ಸಮಾನವಾದ ಪವಿತ್ರ ಕ್ಷೇತ್ರ ಹಿಂದೆಯೂ ಆಗಿಲ್ಲ, ಮುಂದೆಯೂ ಆಗುವುದಿಲ್ಲವೆಂಬ ಖ್ಯಾತಿಯಿದೆ. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಒಂದಾಗಿದ್ದು, ಭ್ರಮರಾಂಭ ಶಕ್ತಿ ಪೀಠ ಮತ್ತು ಜಗದ್ಗುರು ಸೂರ್ಯಸಿಂಹಾಸನ ಪೀಠ ಶೋಭಾಯಮಾನದಿಂದ ತ್ರಿವೇಣಿ ಸಂಗಮವಾಗಿದೆ ಎಂದರು.

    ಪೀಠಾರೋಹಣ ಮತ್ತು ಪೀಠದ ಕರ್ಣದಾರತ್ವವನ್ನು ವಹಿಸಿಕೊಂಡು 12 ವರ್ಷ ಪೂರ್ಣಗೊಂಡಿದೆ. ಇದರ ಅಂಗವಾಗಿ ಸುಕ್ಷೇತ್ರ ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾರ್ಗ ಮಧ್ಯೆ ಊರುಗಳಲ್ಲಿ ಧರ್ಮ ಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ ಮತ್ತು ವೃಕ್ಷ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2023 ಜ.10 ರಿಂದ 14 ರವರೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾಧಿವೇಶನ, ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಮತ್ತು ತೆಲುಗು, ಕನ್ನಡ ಮತ್ತು ಮರಾಠಿ ವೀರಶೈವ ಸಾಹಿತ್ಯಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಮತ್ತು ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts