More

    ಅನಾರೋಗ್ಯ ಪೀಡಿತ ಕರಕಲಗಡ್ಡಿ ರೈತರಿಗೆ ಡ್ರೋಣ್ ಮೂಲಕ ಔಷಧ ಪೂರೈಕೆ,

    ಲಿಂಗಸುಗೂರು: ತಾಲೂಕಿನ ಕೃಷ್ಣಾ ನದಿ ಪ್ರವಾಹದಿಂದ ಕರಕಲಗಡ್ಡಿಯ ನಡುಗಡ್ಡೆ ಪ್ರದೇಶದಲ್ಲಿ ವಾಸವಿರುವ ಅನಾರೋಗ್ಯ ಪೀಡಿತ ವ್ಯಕ್ತಿಗೆ ತಾಲೂಕು ಆಡಳಿತವು ಡ್ರೋನ್ ಕ್ಯಾಮರಾ ಮೂಲಕ ಔಷಧ ಹಾಗೂ ಅಲ್ಲಿನ ರೈತಾಪಿ ವರ್ಗಕ್ಕೆ ಅಗತ್ಯ ವಸ್ತುಗಳನ್ನು ಶುಕ್ರವಾರ ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದೆ.

    ನಡುಗಡ್ಡೆಯಲ್ಲಿ ಸಿಲುಕಿರುವ ನಾಲ್ವರ ಪೈಕಿ ತಿಪ್ಪಣ್ಣ ಎಂಬಾತನು ಪಾರ್ಶ್ವವಾಯು ಪೀಡಿತರು. ಔಷಧ ಮುಗಿದಿರುವ ಕಾರಣ ಅವರಿಗೆ ಡ್ರೋನ್ ಮೂಲಕ 15 ದಿನಕ್ಕಾಗುವಷ್ಟು ಔಷಧ, ಅಗತ್ಯ ವಸ್ತುಗಳು ಹಾಗೂ ಅವರ ಜತೆ ನಿರಂತರ ಸಂಪರ್ಕ ಸಾಧಿಸಲು ಹೊಸ ಮೊಬೈಲ್ ಕಳುಹಿಸಿ ಕೊಡಲಾಯಿತು.

    ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾದ ವೇಳೆ ಮ್ಯಾದರಗಡ್ಡಿಯಲ್ಲಿ ವಾಸವಿದ್ದ 14 ರೈತರ ಪೈಕಿ ನಾಲ್ವರನ್ನು ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಾಯದಿಂದ ರಕ್ಷಣಾ ಬೋಟ್ ಮೂಲಕ ರಕ್ಷಣೆ ಮಾಡಲಾಗಿತ್ತು. ಮ್ಯಾದರಗಡ್ಡಿಗೆ ಹೊಂದಿಕೊಂಡಿರುವ ಕರಕಲಗಡ್ಡಿಯಲ್ಲಿ ನಾಲ್ವರು ಇರುವ ಒಂದು ಕುಟುಂಬ ವಾಸವಿದೆ. ಅವರ ರಕ್ಷಣೆಗೆ ಗುರುವಾರ ಎನ್‌ಡಿಆರ್‌ಎಫ್ ತಂಡವು ಕಾರ್ಯಚರಣೆಗೆ ಇಳಿಸಲು ನಿರ್ಧರಿಸಲಾಗಿತ್ತು. ನದಿಯಲ್ಲಿ ನೀರಿನ ರಭಸ ಮತ್ತು ಗುಂಡುಕಲ್ಲುಗಳಿರುವ ಪ್ರಯುಕ್ತ ರಕ್ಷಣಾ ಬೋಟ್ ಹಾಕಲು ಸಾಧ್ಯವಾಗಿರಲಿಲ್ಲ.

    ಶುಕ್ರವಾರ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ನಿರ್ದೇಶನದಂತೆ, ಕೃಷಿ ವಿವಿ ಕುಲಪತಿ ಡಾ.ಕಟ್ಟಿಮನಿ ಮಾರ್ಗದರ್ಶನದಂತೆ ಕೃಷಿ ತಾಂತ್ರಿಕ ಕಾಲೇಜಿನ ಮುಖ್ಯಸ್ಥ ವೀರನಗೌಡ, ವಾಯು ತೇಚ್ನೋವೇಷನ್ಸ್ ಎಇಸಿ ಅಭಿಷೇಕ್, ಸಹಾಯಕ ಪ್ರಾಧ್ಯಾಪಕ ಸುನೀಲ್ ಸಿರವಾಳ ಅವರ ಸಹಕಾರದೊಂದಿಗೆ ಎಸಿ ರಾಜಶೇಖರ ಡಂಬಳ, ತಹಸೀಲ್ದಾರ್ ಚಾಮರಾಜ ಪಾಟೀಲ್, ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರು ಅವರುಗಳು ಕೃಷಿ ವಿವಿಯ ಡ್ರೋನ್ ಬಳಸಿ ಔಷಧ ಮತ್ತು ಅಗತ್ಯ ವಸ್ತುಗಳ ಪೂರೈಕೆ ಕಾರ್ಯಚರಣೆ ಯಶಸ್ವಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts