More

    2,4ನೇ ಸೆಮಿಸ್ಟರ್ ಪರೀಕ್ಷೆಯಿಂದ ವಿನಾಯಿತಿ ನೀಡಿ

    ಲಿಂಗಸುಗೂರು: ಪದವಿಯ 2 ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಯಿಂದ ವಿನಾಯತಿ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

    ಈ ಹಿಂದೆ ಪರೀಕ್ಷೆ ಶುಲ್ಕ ಪಾವತಿಸಿದ್ದರೂ ಪರೀಕ್ಷೆಗಳು ನಡೆದಿಲ್ಲ. ಕೋವಿಡ್ ಕಾರಣಕ್ಕೆ 2 ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಗುಲ್ಬರ್ಗ ವಿವಿ ಆದೇಶಿಸಿದೆ. ಆದರೆ ಈಗ ಮರು ಪರೀಕ್ಷೆ ನಡೆಸಲು ತಿರ್ಮಾನಿಸಿ ಸುತ್ತೋಲೆ ಹೊರಡಿಸಿರುವುದು ಖಂಡನೀಯ.

    2 ಮತ್ತು 4 ನೇ ಸೆಮಿಸ್ಟರ್ ತರಗತಿಗಳನ್ನು ನೆಡಸದೆ ಪರೀಕ್ಷೆಗೆ ತಯಾರಿ ಮಾಡಿಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಎರಡೂ ಸೆಮಿಸ್ಟರ್ ಪರೀಕ್ಷೆಗಳನ್ನು ಒಟ್ಟಿಗೆ ಎದುರಿಸುವುದು ಕಷ್ಟಕರವಾಗಲಿದೆ. ಕೂಡಲೇ ಪರೀಕ್ಷೆ ರದ್ದುಗೊಳಿಸಬೇಕೆಂದು ಆಗ್ರಹಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts