More

    ರಾಷ್ಟ್ರದ ಪ್ರಗತಿಗೆ ಸ್ತ್ರೀಯರ ಕೊಡುಗೆ ಅಪಾರ

    ಲಿಂಗಸುಗೂರು: ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಷ್ಟೇ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದು, ರಾಷ್ಟ್ರದ ಸಮಗ್ರ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.

    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ, ತಾಪಂ ಮತ್ತು ಸಿಡಿಪಿಒ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಜಾರಿಗೆ ತಂದಿದ್ದು ಅವುಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

    ಸಿಡಿಪಿಒ ಶರಣಮ್ಮ ಕಾರನೂರ ಮಾತನಾಡಿ, ಮಹಿಳೆಯರು ಉದ್ಯೋಗದಲ್ಲಿ ಶೇ.42ರಷ್ಟು ನಿರತರಾಗಿದ್ದು, ಅವರ ಸಾಧನೆ ಇಮ್ಮಡಿಯಾಗುತ್ತಿದೆ. ಮಹಿಳೆಯರ ಸಮಾನತೆಗೆ ಹೋರಾಟ ಮಾಡಬೇಕಿದ್ದು, ಹಕ್ಕುಗಳಿಗೆ ಧಕ್ಕೆ ಉಂಟಾದಾಗ ಇಲಾಖೆ ಮತ್ತು ಕಾನೂನು ಸದುಪಯೋಗ ಪಡೆಯಬೇಕೆಂದರು.

    ಇದೇವೇಳೆ ಬಾಲ್ಯವಿವಾಹ ಕುರಿತು ಶಿಕ್ಷಕರಾದ ರಾಜನಗೌಡ ಹಾಗೂ ನಾಗರಾಜ ಮಾಂಡ್ರೆ ನಿರ್ದೇಶನ ಮತ್ತು ಅಭಿನಯದ ಕಿರುಚಿತ್ರ ಪ್ರದರ್ಶಿಸಲಾಯಿತು. ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಉಪಾಧ್ಯಕ್ಷ ಎಂ.ಡಿ.ರಫಿ, ಪ್ರಾಚಾರ್ಯ ಸಾಬಣ್ಣ ವಗ್ಗರ್, ಮಹಿಳಾ ಒಕ್ಕೂಟದ ಶರಣಮ್ಮ ಹೂನೂರು, ಸರ್ವೇಶ್ವರಿ ಹಿರೇಮಠ, ಈರಮ್ಮ ಗುಂಜಳ್ಳಿ, ಶ್ರೀದೇವಿ ಶ್ರೀನಿವಾಸ, ವಿಜಯಲಕ್ಷ್ಮೀ ದೇಸಾಯಿ, ಮುಖಂಡರಾದ ಭೂಪನಗೌಡ ಪಾಟೀಲ್, ಗುಂಡಪ್ಪ ನಾಯಕ, ಪಾಮಯ್ಯ ಮುರಾರಿ, ಪ್ರಮೋದ ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts