More

    ಹೋರಾಟದಿಂದ ಮಾತ್ರ ಸಿಗಲಿದೆ ಹಕ್ಕು, ಶ್ರೀ ಮಹಾಂತಲಿಂಗ ಶಿವಾಚಾರ್ಯರ ಅನಿಸಿಕೆ

    ಲಿಂಗಸುಗೂರು: ಸರ್ಕಾರ ಸಂವಿಧಾನದಡಿ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಬೇಡ ಜಂಗಮರಿಗೆ ಒದಗಿಸಲು ಆದೇಶ ಹೊರಡಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದು, ಸಂಘಟನಾತ್ಮಕ ಹೋರಾಟದಿಂದ ಮಾತ್ರ ಸಂವಿಧಾನದ ಹಕ್ಕು ಪಡೆಯಬಹುದು ಎಂದು ಸಂತೆಕೆಲ್ಲೂರು ಮಹಾಂತಿನ ಮಠದ ಮಹಾಂತಲಿಂಗ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಎಸಿ ಕಚೇರಿ ಆವರಣದಲ್ಲಿ ಕಳೆದ 14 ದಿನಗಳಿಂದ ಬೇಡ ಜಂಗಮ ಸಮುದಾಯದ ಮುಖಂಡರು ನಡೆಸುತ್ತಿರುವ ಅನಿರ್ದಿಷ್ಟ ಧರಣಿಗೆ ಬೆಂಬಲಿಸಿ ಮಾತನಾಡಿದ ಅವರು, ಬೇಡ ಜಂಗಮರು ಹೊಸದಾಗಿ ಮೀಸಲಾತಿ ನೀಡುವಂತೆ ಕೇಳುತ್ತಿಲ್ಲ. ಸಾಂವಿಧಾನಿಕವಾಗಿ ಅಡಕವಾಗಿರುವ ಹಕ್ಕನ್ನು ಕೇಳುತ್ತಿದ್ದಾರೆ ಎಂದರು.

    ವೀರಶೈವ ಲಿಂಗಾಯತ ಜಂಗಮರೇ, ಬೇಡ ಜಂಗಮರೆಂದು ತೀರ್ಪು ಮತ್ತು ಆದೇಶಗಳಿದ್ದರೂ ಸರ್ಕಾರ ಆದೇಶ ಹೊರಡಿಸುತ್ತಿಲ್ಲ. ಹೀಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ಅಧ್ಯಕ್ಷ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯ ಪ್ರತಿಪಾದನಾ ಸತ್ಯಾಗ್ರಹಕ್ಕೆ ಮಠಾಧೀಶರು ಮತ್ತು ಸಮುದಾಯವವರು ಬೆಂಬಲಿಸಬೇಕೆಂದು ಹೇಳಿದರು.

    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬೇಡ ಜಂಗಮರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಂವಿಧಾನದ ಹಕ್ಕು ಪಡೆಯಲು ನಡೆಸುತ್ತಿರುವ ಹೋರಾಟಕ್ಕೆ ವೀರಶೈವ ಮಹಾಸಭಾ ಮತ್ತು ಎಲ್ಲ ಲಿಂಗಾಯತ ಒಳಪಂಗಡಗಳು ಸಹಕಾರ ನೀಡಲಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts