More

    ಕೃಷಿ ಕಾಯ್ದೆಗಳನ್ನು ಹಿಂಪಡೆಯಿರಿ

    ಲಿಂಗಸುಗೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಜನಾಂದೋಲನಗಳ ಮಹಾಮೈತ್ರಿ ಕೂಟದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು.

    ಜನಜಾಗೃತಿ ಜಾಥಾ ಶುಕ್ರವಾರ ಪಟ್ಟಣದ ಗಡಿಯಾರ ವೃತ್ತಕ್ಕೆ ಆಗಮಿಸಿದಾಗ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೈಬಿಟ್ಟರೂ ರಾಜ್ಯ ಸರ್ಕಾರ ಮುಂದುವರಿಸಿದೆ. ಈ ಹಿಂದೆ ಕೃಷಿಕರು ಮಾತ್ರ ಜಮೀನು ಕೊಂಡುಕೊಳ್ಳಬಹುದಾಗಿತ್ತು. ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಶ್ರೀಮಂತರು, ಕಾರ್ಪೋರೇಟ್ ವಲಯಗಳು ಕೂಡ ಭೂಮಿ ಖರೀದಿಸಬಹುದಾಗಿದೆ. ಇದರಿಂದ ಕೃಷಿ ಭೂಮಿ ಕಣ್ಮರೆಯಾಗಿ ಉಳ್ಳವರಿಗೆ ಎಲ್ಲ ಭೂಮಿ ಎಂಬಂತಾಗಲಿದೆ. ಇದರಿಂದ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿ ಸಣ್ಣ, ಅತಿಸಣ್ಣ ರೈತರು ನಿರ್ಗತಿಕರಾಗುವ ಸಾಧ್ಯತೆಯಿದೆ ಎಂದರು.

    ಎಪಿಎಂಸಿ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ ಜಾರಿಯಿಂದ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದ್ದು, ಮಾರಾಟ ವ್ಯವಸ್ಥೆಯಲ್ಲಿ ಅವ್ಯವಹಾರ, ಸಣ್ಣಪುಟ್ಟ ದೋಷಗಳನ್ನು ಪ್ರಶ್ನಿಸುವ ಹಕ್ಕು ಇಲ್ಲದಂತಾಗಿ ಎಪಿಎಂಸಿಗಳು ನಷ್ಟ ಅನುಭವಿಸುವ ಜತೆಗೆ ರೈತರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ ಜಾರಿಯಿಂದ ಎಮ್ಮೆ, ಕೋಣದ ಮಾಂಸ ರಫ್ತು ಮಾಡಲು ಪರವಾನಗಿ ನೀಡಿ ಗೋವು, ಕರು, ಎತ್ತು, ಗೂಳಿ ಮಾಂಸ ರಫ್ತಿಗೆ ನಿಷೇಧ ಹೇರಿದೆ. ಇದರಿಂದ ಗೋವುಗಳ ಕಳ್ಳಸಾಗಣೆ ಹೆಚ್ಚಾಗುವ ಸಾಧ್ಯತೆಯಿದ್ದು, ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ರೈತರು, ಹಾಲು ಉತ್ಪಾದಕರ ಉಪಯೋಗಕ್ಕೆ ಬಾರದ ಜಾನುವಾರುಗಳ ಮಾರಾಟ ನಿಷೇಧದಿಂದ ಗ್ರಾಮೀಣ ರೈತರಿಗೆ ತೊಂದರೆಯಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts