More

    ರಸ್ತೆ ಮೇಲೆ ಕಾಲುವೆ ನೀರು; ಐದನಾಳ ಗ್ರಾಮದ ಬೀದಿಗಳು ಕೆಸರುಮಯ

    ಲಿಂಗಸುಗೂರು: ತಾಲೂಕಿನ ಕಾಳಾಪುರ ಗ್ರಾಪಂ ವ್ಯಾಪ್ತಿಯ ಐದನಾಳ ಗ್ರಾಮದೊಳಕ್ಕೆ ರಾಂಪೂರ ಏತನೀರಾವರಿ ಯೋಜನೆಯ ವಿತರಣಾ ಕಾಲುವೆಯಿಂದ ನೀರು ನುಗ್ಗಿ ರಸ್ತೆಗಳು ಕೆಸರುಮಯವಾಗಿ, ಜನ-ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

    ಗ್ರಾಮದ ಪಕ್ಕದಲ್ಲಿ ರಾಂಪುರ ಏತನೀರಾವರಿ ಯೋಜನೆಯ 2ನೇ ವಿತರಣಾ ನಾಲೆ ಹಾಯ್ದು ಹೋಗಿದೆ. ಈ ಕಾಲುವೆಯಿಂದ 250 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಐದನಾಳ ಗ್ರಾಮದ ಪ್ರಭಾವಿ ರೈತರು ತಮ್ಮ ಜಮೀನಿಗೆ ನೀರು ಹಾಯಿಸಿಕೊಳ್ಳಲು ಔಟ್‌ಲೆಟ್ ಬಂದ್ ಮಾಡದ ಕಾರಣ ಹೆಚ್ಚವರಿ ನೀರು ಗ್ರಾಮದೊಳಕ್ಕೆ ನುಗ್ಗುತ್ತಿದೆ. ರಸ್ತೆ ಮೇಲೆ ನೀರು ಹರಿದು ಸಮಸ್ಯೆ ಎದುರಾಗಿದೆ.

    ಕಾಲುವೆ ನಿರ್ಮಾಣ ವೇಳೆ ಇಳಿಜಾರು ಪ್ರದೇಶದಲ್ಲಿ ಕ್ಯೂಬ್ ಕಾಲುವೆ ವಿನ್ಯಾಸ ಮಾಡಲಾಗಿದ್ದು, ಇದರಿಂದ ಕಾಲುವೆ ಕೊನೆಯ ಭಾಗಕ್ಕೆ ಸರಾಗವಾಗಿ ನೀರು ಹರಿಯುವುದಿಲ್ಲ. ಪದೇ ಪದೆ ನೀರು ಗ್ರಾಮಕ್ಕೆ ನುಗ್ಗುತ್ತಿರುತ್ತದೆ. ಕಾಲುವೆಯ ಹೂಳು ತೆಗೆದು, ಜಂಗಲ್ ಕಟಿಂಗ್ ಮಾಡದ ಕಾರಣ ಸಮಸ್ಯೆ ತಲೆದೋರುತ್ತಿದೆ. ಕಾಲುವೆ ನಿರ್ವಹಣೆಗೆ ಸಿಬ್ಬಂದಿ ಕೊರತೆ, ಮೇಲುಸ್ತುವಾರಿ ಅಭಾವದಿಂದ ಇದೆಲ್ಲ ಆಗುತ್ತಿದೆ. ಪ್ರತಿವರ್ಷ ಕಾಲುವೆ ದುರಸ್ತಿಗಾಗಿ ಲಕ್ಷಾಂತರ ರೂ. ಖರ್ಚಾಗುತ್ತಿದ್ದರೂ, ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ಗ್ರಾಮಸ್ಥರಾದ ರುದ್ರಯ್ಯಸ್ವಾಮಿ, ಬಸವರಾಜ ಪಾಗದ, ಬಸವಲಿಂಗಪ್ಪ ಹಿರೇಕುರುಬರ, ಹುಚ್ಚಪ್ಪ ಇತರರು ಆರೋಪಿಸಿದ್ದಾರೆ.

    ರಾಂಪುರ ಯೋಜನೆಯ 2ನೇ ವಿತರಣಾ ಕಾಲುವೆಯು ಬಿ-ಸ್ಕೀಂ ಅಡಿ ಬರುತ್ತದೆ. ರೈತರ ಹಿತದೃಷ್ಟಿಯಿಂದ ನೀರು ಹರಿಸಲಾಗುತ್ತಿದೆ. ಆದರೆ, ಕೆಲ ರೈತರು ಹಿಟಾಚಿ ಬಳಸಿ ಕಾಲುವೆಯ ಗೇಟ್‌ಗೆ ಆಗಾಗ ಧಕ್ಕೆ ಮಾಡುತ್ತಿದ್ದಾರೆ. ಐದನಾಳ ಗ್ರಾಮದೊಳಗೆ ನೀರು ಪೋಲಾಗುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು.
    | ನಾಗೇಶ, ರಾಂಪುರ ಏತನೀರಾವರಿ ಯೋಜನೆ ಜೆಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts