More

    ಕನ್ನಡ ಭಾಷಾ ತಂತ್ರಾಂಶ ಅಳವಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

    ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿಗಳಲ್ಲಿ ಕನ್ನಡ ಭಾಷೆಯ ತಂತ್ರಾಂಶ ಅಳವಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಸ್ಥಳೀಯ ಸಾರಿಗೆ ಘಟಕ ವ್ಯವಸ್ಥಾಪಕ ದೇವಪ್ಪ ಕುಂಬಾರರಿಗೆ ಗುರುವಾರ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶದಂತೆ ಎಲ್ಲ ಇಲಾಖೆಗಳ ಕಚೇರಿಗಳ ವ್ಯವಹಾರಗಳ ವೇತನ ಪಟ್ಟಿಯಲ್ಲಿ ಕನ್ನಡ ಭಾಷೆ ತಂತ್ರಾಂಶ ಅಳವಡಿಸಲಾಗಿದೆ. ಸಾರಿಗೆ ಇಲಾಖೆ ಬೆಂಗಳೂರು ಮ.ಸಾ.ಸಂಸ್ಥೆ, ವಾ.ಕ.ರ.ಸಾ.ಸಂಸ್ಥೆಗಳಲ್ಲಿ ಕನ್ನಡ ತಂತ್ರಾಶದ ಬಳಕೆಯಾಗುತ್ತಿದೆ. ಆದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿಗಳಲ್ಲಿ ಮಾತ್ರ ಇನ್ನೂ ಇಂಗ್ಲೀಷ್ ತಂತ್ರಾಂಶ ಮುಂದುವರಿದಿರುವುದು ಕನ್ನಡ ಕಾಯಕ ವರ್ಷವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕನ್ನಡಿಗರಿಗೆ ಕಿರಿಕಿರಿ ಉಂಟು ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಂಘಟನೆಯ ಸದಸ್ಯರಾದ ರವಿಕುಮಾರ ಬರಗುಡಿ, ಹನುಮಂತ ನಾಯಕ, ಅಮರೇಶ, ಜಮೀರ್ ಖಾನ್, ರುದ್ರಯ್ಯಸ್ವಾಮಿ, ಇರ್ಫಾನ್ ಚೌದ್ರಿ, ಆರೀಫ್, ನಿರುಪಾದಿ, ಇಲಿಯಾಸ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts