More

    ಪಹಣಿ ಪಡೆಯಲು ಮುಗಿಬಿದ್ದ ರೈತರು; ಬೆಳೆಹಾನಿ ಪರಿಹಾರಕ್ಕಾಗಿ ಸರತಿಯಲ್ಲಿ ನಿಂತ ಅನ್ನದಾತರು

    ಲಿಂಗಸುಗೂರು: ಅಕಾಲಿಕ ಮಳೆಯಿಂದ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ಸರ್ಕಾರದಿಂದ ಬೆಳೆನಷ್ಟ ಪರಿಹಾರಕ್ಕೆ ಬೇಕಾದ ಜಮೀನಿನ ಪಹಣಿ ಪತ್ರಿಕೆ ಪಡೆಯಲು ರೈತರು ಪಹಣಿ ಕೇಂದ್ರದ ಮುಂದೆ ಸರತಿಯಲ್ಲಿ ನಿಂತಿದ್ದು, ಬುಧವಾರ ಕಂಡು ಬಂತು.

    ಸ್ಥಳೀಯ ಕಂದಾಯ ವಿಭಾಗದ ಲಿಂಗಸುಗೂರು, ಗುರುಗುಂಟಾ, ಮುದಗಲ್ ಮತ್ತು ಮಸ್ಕಿ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ 9060 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಯಾಗಿರುವುದಾಗಿ ಅಂದಾಜಿಸಲಾಗಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಜಂಟಿ ಸರ್ವೇ ಕಾರ್ಯ ಪ್ರಗತಿಯಲ್ಲಿದೆ.

    ಲಿಂಗಸುಗೂರು ಹೋಬಳಿ ವ್ಯಾಪ್ತಿಯಲ್ಲಿ 2325 ಹೆಕ್ಟೇರ್, ಗುರುಗುಂಟಾ 1310 ಹೆಕ್ಟೇರ್, ಮುದಗಲ್ 3295 ಹೆಕ್ಟೇರ್, ಮಸ್ಕಿ 2440 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ.

    ಕಂದಾಯ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ತಂಡವು ಈಗಾಗಲೇ ಸಮೀಕ್ಷೆ ಕಾರ್ಯ ಚುರುಕುಗೊಳಿಸಿದ್ದಾರೆ. ಸರ್ಕಾರದಿಂದ ಬೆಳೆನಷ್ಟ ಪರಿಹಾರ ಪಡೆಯಲು ರೈತರಿಂದ ಜಮೀನಿನ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಪ್ರತಿ ಸ್ವೀಕರಿಸಿ ಆಯಾ ಗ್ರಾಪಂ ಗ್ರಾಮಲೆಕ್ಕಿಗರು ಪರಿಹಾರ ಎಂಬ ಸಾಫ್ಟ್‌ವೇರ್‌ನಲ್ಲಿ ಎಂಟ್ರಿ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರದಿಂದ ಬೆಳೆನಷ್ಟ ಪರಿಹಾರ ಪಡೆಯಲು ಪಹಣಿ ಪತ್ರಿಕೆಗಾಗಿ ಪಹಣಿ ಕೇಂದ್ರಕ್ಕೆ ರೈತರು ಮುಗಿಬಿದ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts