More

    ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಿ

    ಕಾಳಗಿ: ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ, ಶಿಸ್ತು, ಸಂಸ್ಕೃತಿ, ಶಿಕ್ಷಣ ನೀಡಿದರೆ ದೇಶಕ್ಕೆ ಹಾಗೂ ಕುಟುಂಬಕ್ಕೆ ಆಸ್ತಿಯಾಗುತ್ತಾನೆ ಎಂದು ಸೂಗುರಿನ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು ನುಡಿದರು.

    ಪಟ್ಟಣದಲ್ಲಿ ಶನಿವಾರ ಎಲ್ಲ ಜಾತಿ ಜನಾಂಗದವರಿಗೆ ಮನೆಮನೆಗೆ ತೆರಳಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ವೃದ್ಧರಿಗೆ ಲಿಂಗ ದೀಕ್ಷೆ ನೀಡಿ, ಸಂಸ್ಕಾರ, ಧರ್ಮ ಜಾಗೃತಿ ಮೂಡಿಸಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿ ಸನ್ಮಾರ್ಗದಲ್ಲಿ ಜೀವನ ಸಾಗಿಸುವಂತೆ ತಿಳಿಹೇಳಿದರು.

    ಯುವಕರು ಇತ್ತೀಚಿಗೆ ಹೆಚ್ಚು ಹೆಚ್ಚು ದುಶ್ಚಟಗಳ ದಾಸರಾಗಿ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ರೋಗಗಳಿಗೆ ತುತ್ತಾಗಿ ಸಾವಿಗಿಡಾಗುತ್ತಿದ್ದಾರೆ. ಇದರಿಂದ ಮುಂದಿನ ಭವಿಷ್ಯದಲ್ಲಿ ಮಕ್ಕಳನ್ನೇ ಆಶ್ರಯಿಸುವ ತಂದೆ-ತಾಯಿಗಳು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ದುಶ್ಚಟಗಳನ್ನು ಮುಚ್ಚುಮರೆಯಿಲ್ಲದೆ ಜೋಳಿಗೆಗೆ ಹಾಕಿ ವ್ಯಸನ ಮುಕ್ತರಾಗಿ ಎಂದು ಹೇಳಿದರು.

    ಕೋಲಿ ಸಮಾಜದ ಯುವ ಮುಖಂಡ ರಾಜಕುಮಾರ ರಾಜಾಪುರ, ಗುರುನಂಜಯ್ಯ ಸ್ವಾಮಿ ಹಿರೇಮಠ, ಸಂತೋಷ ಚಿಕ್ಕಮಠ, ಶಿವರಾಯ ಕೋಯಿ, ಭೀಮರಾಯ ಮಲಘಾಣ, ಸೂರ್ಯಕಾಂತ ಕಟ್ಟಿಮನಿ, ಬಲರಾಮ ವಲ್ಲ್ಯಾಪುರೆ, ಸುನೀಲ ರಾಜಾಪುರ, ದಯಾನಂದ ಹೊಸಮನಿ, ಕಾಳಪ್ಪ ಕರೆಮನೊರ, ಶರಣು ಬೆಲೂರ, ರಾಜು ಪಂಚಾಳ, ಗೌಡಪ್ಪಗೌಡ ಕಲ್ಲಹಿಪ್ಪರಗಾ, ನರಸಿಂಗ ಒಡೆಯರಾಜ, ಮಲ್ಲಪ್ಪ ಪೂಜಾರಿ, ದಯಾನಂದ ಕಡಬೂರ, ಕಿರಣ ಕೊಯಿ, ಅನೀಲ ಬೆಣ್ಣೂರ, ಕಾಳಪ್ಪ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts