More

    ಜೀವ ಉಳಿಸಲು ರಕ್ತದಾನ ಸಹಾಯಕ

    ರಾಯಬಾಗ: ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಜೀವನ್ಮರಣ ಹೋರಾಟದಲ್ಲಿರುವ ಅನೇಕರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಬೆಳಗಾವಿ ಬಿಮ್ಸ್ ಆಸ್ಪತ್ರೆ ವೈದ್ಯ ಡಾ.ಮಂಜುನಾಥ ಬಾನಸೆ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಬಿಮ್ಸ್ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 18 ರಿಂದ 60 ವರ್ಷ ಒಳಗಿನ ಆರೋಗ್ಯವಂತ ಪುರುಷ 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಉತ್ತಮ ಆರೋಗ್ಯ ಹೊಂದಬಹುದು.

    ರಕ್ತದಾನದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ದೇಹದಲ್ಲಿ ಕೊಬ್ಬಿನಂಶ ಕಡಿಮೆ ಮಾಡುತ್ತದೆ, ಹೃದಯಾಘಾತ ಕಡಿಮೆಯಾಗುತ್ತದೆ ಎಂದರು. ಬಿಮ್ಸ್ ಆಸ್ಪತ್ರೆ ಸಮಾಲೋಚಕ ಶಂಕರ, ರಾಯಬಾಗ ಲ್ಯಾಬ್ ತಂತ್ರಜ್ಞಾನ ಅಧಿಕಾರಿ ಮಂಜುನಾಥ ಜಾಧವ, ನಾಜೀಯಾ ಜಿನ್ನಾಬಡೆ, ಶ್ರೀಶೈಲ ಶಿರೂರ, ಶೀತಲ ಚೌಗಲಾ, ರಾಜೀಕ್‌ಅಹ್ಮದ್, ಸೋನಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts