More

    ಜೀವ ಉಳಿಸುವ ರಕ್ತದಾನ ಸರ್ವಶ್ರೇಷ್ಠ

    ಶಿಕಾರಿಪುರ: ಎಲ್ಲ ದಾನಗಳಿಗಿಂತ ಜೀವವನ್ನು ಉಳಿಸುವ ರಕ್ತದಾನ ಅತ್ಯಂತ ಶ್ರೇಷ್ಠ ಎಂದು ಸರ್ಕಾರಿ ಆಸ್ಪತ್ರೆ ಆಪ್ತಸಮಾಲೋಚಕ ಬಿ.ಕೆ.ಚಂದ್ರಶೇಖರ್ ಹೇಳಿದರು.

    ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ಎಚ್‌ಐವಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಎಷ್ಟೋ ಜನರು ಮೃತಪಡುತ್ತಾರೆ. ರಕ್ತದಾನ ಮಾಡುವುದು ಅತ್ಯಂತ ಪುಣ್ಯದ ಕೆಲಸ. ಇದು ನಿಜವಾದ ಸಾಮಾಜಿಕ ಕಳಕಳಿ ಎಂದರು.
    ಆರೋಗ್ಯವAತೆ ವ್ಯಕ್ತಿ ಎಷ್ಟು ಬಾರಿಯಾದರೂ ರಕ್ತ ನೀಡಬಹುದು. ನೂರಾರು ಬಾರಿ ರಕ್ತದಾನ ಮಾಡಿದ ಮಹನೀಯರು ನಮ್ಮ ನಡುವೆ ಇದ್ದಾರೆ. ರಕ್ತದಾನ ಶಿಬಿರಗಳು ಹೆಚ್ಚುತ್ತಿರುವುದು ಸಂತಸದ ಸಂಗತಿ. ನಮ್ಮ ಸುತ್ತಮುತ್ತಲಿನವರಿಗೆ ರಕ್ತದಾನ ಮಾಡುವುದರ ಮಹತ್ವ ತಿಳಿಸಿ ರಕ್ತದಾನಕ್ಕೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
    ಎಚ್‌ಐವಿಯಂತಹ ಕಾಯಿಲೆಗಳಿಂದ ದೂರವಿರಲು ಮುಂಜಾಗ್ರತೆ ಅಗತ್ಯ. ಈ ರೋಗಕ್ಕೆ ತುತ್ತಾದ ವ್ಯಕ್ತಿ ಸಾವಿನ ಬಾಯಿಯಿಂದ ಹೊರಬರಲು ಸಾಧ್ಯವಿಲ್ಲ. ಏಡ್ಸ್ ರೋಗಿಗಳ ಸಂಖ್ಯೆ ಇತ್ತೀಚೆಗೆ ಮತ್ತೆ ಹೆಚ್ಚುತ್ತಿದೆ. ಯುವಜನರು ಇದರ ಬಗ್ಗೆ ಅರ್ಥಮಾಡಿಕೊಂಡು ಮುಂದಡಿ ಇಡಬೇಕು ಎಂದು ಎಚ್ಚರಿಸಿದರು.
    ಪ್ರಾಚಾರ್ಯ ಪ್ರೊ. ಶೇಖರ್ ಮಾತನಾಡಿ, ಆರೋಗ್ಯವೇ ಎಲ್ಲ ಸಂಪತ್ತಿಗಿAತ ದೊಡ್ಡದು. ಆರೋಗ್ಯ ಭಾಗ್ಯ ನಮ್ಮದಾಗಲು ದೈನಂದಿನ ಚಟುವಟಿಕೆಗಳಲ್ಲಿ ಕೆಲ ಇತಿಮಿತಿಗಳನ್ನು ಹಾಕಿಕೊಳ್ಳಬೇಕು. ನಿರಂತರ ವ್ಯಾಯಾಮ, ಯೋಗದ ಜತೆಗೆ ನಿರಂತರ ಚಟುವಟಿಕೆ ಮತ್ತು ಒತ್ತಡರಹಿತ ಮನಸ್ಸು ನಮಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿ ಎಂದರು.
    ಡಾ. ಪಾಂಡುರAಗ, ಪಟ್ಟಣ ರಾಕೇಶ್, ಡಾ. ಅಜಯ್‌ಕುಮಾರ್, ಆರ್.ಕೆ.ವಿನಯ್‌ಕುಮಾರ್, ಉಪನ್ಯಾಸಕರಾದ ಎ.ಬಿ.ಸುಽÃರ್, ಸದಾಶಿವಪ್ಪ, ಸುನಿಲï‌ಕುಮಾರ್, ಶಕುಂತಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts