More

    ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳ ಬದುಕು ಉಜ್ವಲ

    ಗೋಕರ್ಣ: ಪರಿಪೂರ್ಣವಾದ ಸಾರಯುಕ್ತ ಭೂಮಿಯಲ್ಲಿ ಬೀಜ ಬಿತ್ತಬೇಕು. ಹಾಗಾದಾಗ ಮಾತ್ರ ಪರಿಪುಷ್ಟವಾದ ಬೆಳೆ ಲಭ್ಯವಾಗುತ್ತದೆ ಎಂದು ಖ್ಯಾತ ವಾಗ್ಮಿ ವೀಣಾ ಬನ್ನಂಜೆ ಹೇಳಿದರು. ಸೋಮವಾರ ಇಲ್ಲಿನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಅವರು ವಿಶೇಷ ಉಪನ್ಯಾಸವಿತ್ತರು.
    ದೇಶದಲ್ಲಿಯೇ ತೀರಾ ಅಪೂರ್ವ ಮತ್ತು ಅಪರೂಪವಾದ ಗುರುಕುಲ ವ್ಯವಸ್ಥೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿದ್ದಾರೆ. ಅಂದರೆ ಸರಿಯಾದ ಭೂಮಿಯಲ್ಲಿ ಬೀಜ ಬಿತ್ತಿದಂತಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಎಲ್ಲ ಸಾರಸರ್ವಸ್ವವನ್ನು ತುಂಬಿಕೊಂಡು ಬೆಳೆಯುವ ವೃಕ್ಷದಂತಾಗಲಿದೆ. ಇದರ ಜತೆಗೆ ಪರಮ ಗುರುವಿನ ದೃಷ್ಟಿ ಬೀಳುವುದು ಬದುಕಿನ ಬಹಳ ವಿಶೇಷವಾದ ವಿರಳ ಭಾಗ್ಯ. ಬಾಲ್ಯದಲ್ಲಿ ಶ್ರೀರಾಮಕೃಷ್ಣ ಪರಮಹಂಸ ಗುರುವರ್ಯರ ದೃಷ್ಟಿ ನರೇಂದ್ರನ ಮೇಲೆ ಬಿತ್ತು. ತತ್ಪರಿಣಾಮವಾಗಿ ನರೇಂದ್ರ ವಿವೇಕಾನಂದರಾಗಿ ವಿಶ್ವವನ್ನೇ ಬೆಳಗಿದರು. ಶ್ರೀರಾಘವೇಶ್ವರ ಗುರುವರ್ಯರ ಮಾರ್ಗದರ್ಶನದ ಈ ವಿಶಿಷ್ಟವಾದ ಗುರುಕುಲದಲ್ಲಿ ಅಂತಹ ಗುರುಶ್ರೇಷ್ಠರ ದಿವ್ಯ ದೃಷ್ಟಿ ವಿದ್ಯಾರ್ಥಿಗಳಿಗೆ ಅನಾಯಾಸ ಪ್ರಾಪ್ತವಾಗಿದೆ. ಶ್ರೀಗಳ ದಿವ್ಯ ದೃಷ್ಟಿ ಪಸರಿಸಿರುವ ಇಂತಹ ಪಾವನ ಪರಿಸರದಲ್ಲಿ ನಿಮ್ಮನ್ನು,ನಿಮ್ಮತನವನ್ನು ಅರಿತುಕೊಳ್ಳುವ ‘ಆತ್ಮವೇದ’ ಶಿಕ್ಷಣ ಪಡೆಯುವ ಪ್ರಯತ್ನ ನಿಮಿಂದಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
    ರಂಗಕರ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಪರಿಚಯಿಸಿದರು. ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸೌಭಾಗ್ಯ ಭಟ್ಟ ನಿರ್ವಹಿಸಿದರು. ಇದೇ ವೇಳೆ ವೀಣಾ ಬನ್ನಂಜೆ ಅವರು ಸಂಘಟನಾ ಚಾತುರ್ಮಾಸ್ಯ ವ್ರತನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಅನುಗ್ರಹ ಆಶೀರ್ವಾದ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts