More

    ಲಕ್ಷ್ಮೇಶ್ವರ ಭಾಗದಲ್ಲಿ ಜನಜೀವನ ಅಸ್ತವ್ಯಸ್ತ

    ಲಕ್ಷ್ಮೇಶ್ವರ: ಜಿಟಿಜಿಟಿ ಮಳೆಯಿಂದ ಒಂದೆಡೆ ಬೆಳೆಗಳಿಗೆ ರೋಗಬಾಧೆ, ಕೃಷಿ ಚಟುವಟಿಕೆಗೆ ಅಡ್ಡಿಯಾದರೆ, ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತಕ್ಕೆ ಕಾರಣವಾಗಿದೆ.


    ದೊಡ್ಡ ಮಳೆಯಾಗದ್ದರಿಂದ ಕಪ್ಪು ಮಣ್ಣಿನ ಜಮೀನುಗಳಿಗೆ ತೇವಾಂಶ ಸಾಕಾಗದೇ ಬಿತ್ತನೆಯಾಗಿಲ್ಲ ಬಿತ್ತಿದ ಬೆಳೆಗೆ ಮಳೆ ಸಾಕಾಗುತ್ತಿಲ್ಲ. ಜಿಟಿಜಿಟಿ ಮಳೆ, ಮೋಡಕವಿದ ವಾತಾವರಣ ಬೆಳೆಗಳಿಗೆ ಕೀಟಬಾಧೆ, ಹಳದಿರೋಗ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಳೆ ಬಿಡುವು ನೀಡದ್ದರಿಂದ ಕಳೆ, ಕೀಟಿ ನಿಯಂತ್ರಣ, ಎಡೆ ಹೊಡೆಯುವುದು, ಗೊಬ್ಬರ ಹಾಕುವ ಕಾರ್ಯ ಸ್ಥಗಿತಗೊಂಡು ಬೆಳೆ ಹಾಳಾಗುತ್ತಿವೆ.


    ರಸ್ತೆಗಳ ಸ್ಥಿತಿ ಅಯೋಮಯ: ಜಾನುವಾರುಗಳನ್ನು ಮೇಯಿಸಲು ಮತ್ತು ಹೊರಗಡೆ ಕಟ್ಟಲೂ ಆಗದಂತಹ ಪರಿಸ್ಥಿತಿಯಿಂದಾಗಿ ರೈತರು ಪರದಾಡುವಂತಾಗಿದೆ. ಕುರಿಗಾಯಿಗಳಿಗೂ ಸಮಸ್ಯೆಯಯಾಗಿದೆ. ಮನೆಗಳ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದಾರೆ. ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರ ದುಸ್ತರವಾಗಿದೆ.


    ಲಕ್ಷ್ಮೇಶ್ವರ ಮಾರ್ಗವಾಗಿ ಗದಗ, ಸವಣೂರ, ಆದ್ರಳ್ಳಿ, ದೇವಿಹಾಳ, ಸೂರಣಗಿ, ಬೆಳ್ಳಟ್ಟಿ, ದೊಡ್ಡೂರ ಸಂರ್ಪಸುವ ರಸ್ತೆ ಸೇರಿ ಗ್ರಾಮೀಣ ಪ್ರದೇಶಗಳ ಮತ್ತು ರೈತ ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪಟ್ಟಣದಲ್ಲಿನ ಮುಖ್ಯ ಬಜಾರ್ ರಸ್ತೆ ಕಾಮಗಾರಿ ನಡೆದಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts