More

    ಮಹಾತ್ಮರ ಸಂದೇಶಗಳಿಂದ ಜೀವನ ಪಾವನ

    ಕಮತಗಿ: ಪ್ರತಿಯೊಬ್ಬರೂ ಮಹಾತ್ಮರ ಸಂದೇಶಗಳನ್ನು ರೂಢಿಸಿಕೊಂಡು ಆತ್ಮರೂಪದಲ್ಲಿ ದೇವರನ್ನು ಕಾಣಬೇಕೆಂದು ವಾರಣಾಸಿಯ ಕಾಶಿ ಪೀಠದ ಶ್ರೀ 1008 ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

    ಸಮೀಪದ ಶಿರೂರ ಶಿವಯೋಗಾಶ್ರಮದ ಲಿಂ. ಸಿದ್ಧಲಿಂಗ ಶ್ರೀಗಳ 53ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ಮನುಷ್ಯ ತನ್ನ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮವಾದ ಜ್ಞಾನ ಪಡೆದು ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಬೇಕು. ಪೂಜಾನಿಷ್ಠರು, ತಪಸ್ವಿಗಳಾಗಿದ್ದ ಲಿಂ. ಸಿದ್ಧಲಿಂಗ ಸ್ವಾಮೀಜಿ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.

    ಸಂಸದ ಪಿ. ಸಿ. ಗದ್ದಿಗೌಡರ ಮಾತನಾಡಿ, ನಮ್ಮ ಪರಂಪರೆಯಲ್ಲಿ ಧಾರ್ಮಿಕ ವಿಚಾರಗಳಿಗೆ ನಂಬಿಕೆ ಇಟ್ಟು ಸಂತರ, ಪೂಜ್ಯರ ತತ್ವ ವಿಚಾರಗಳನ್ನು ಭಕ್ತಿಯಿಂದ ಅಳವಡಿಸಿಕೊಂಡು ಜೀವನ ಸಾಗಿಸಿದಾಗ ಬದುಕು ಸುಂದರವಾಗುತ್ತದೆ ಎಂದರು.

    ಗುಳೇದಗುಡ್ಡ ಅಮರೇಶ್ವರ ಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್ಲಕೇರೂರ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.

    ಸಾಧನೆಗೈದ ರೈತರು, ಸೈನಿಕರು, ಶಿಕ್ಷಕರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಶಿವಯೋಗಾಶ್ರಮದ ಮರಿಮಹಾಂತ ಚನ್ನವೀರ ದೇವರು ಹಾಗೂ ಕೊಣ್ಣೂರು ಹೊರಗಿನಮಠದ ವಿಶ್ವಪ್ರಭು ಶಿವಾಚಾರ್ಯರು, ಕೊರ್ತಿ ಕೊಲ್ಹಾರದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

    ಬೆಳಗಾವಿ ಕಾರಂಜಿ ಮಠದ ಶ್ರೀ ಡಾ. ಶಿವಯೋಗಿ ದೇವರು ಎಸ್‌ಎಸ್‌ವಿವಿ ಸಂಘದ ತಮ್ಮಣ್ಣ ಗಿರಿಜಾ, ನ್ಯಾಯವಾದಿ ಸಿ.ವಿ. ಕೋಟಿ, ಡಾ. ವೈ. ಕೆ. ಕೋಟಿಕಲ್, ಅಂದಾನೆಪ್ಪ ಕೋಟಿ, ವೀರಣ್ಣ ಚಿತ್ತವಾಡಗಿ, ಬಸವರಾಜ ಬಿಲ್ಲಾರ, ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ ಮಳ್ಳಿ, ಶಂಕರ ದೇಶಾನಿ, ಎಸ್.ಬಿ. ಮಾಚಾ, ಹನುಮಂತ ಆಡಿನ, ಸಿದ್ದಪ್ಪ ಗಾಳಿ, ಮಳಿಯಪ್ಪ ಗಾಣಿಗೇರ, ಎಸ್.ಬಿ. ನಡುವಿನಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts