ವೃದ್ಧೆ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

1 Min Read
ವೃದ್ಧೆ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ಪುತ್ತೂರು: 2016ರಲ್ಲಿ ಹಾರಾಡಿಯ ಬಾಡಿಗೆ ಮನೆಯಲ್ಲಿದ್ದ ಒಂಟಿ ವೃದ್ಧೆ ವಿನೋದಿನಿ (77) ಅವರನ್ನು ಕೊಲೆಗೈದು ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಪ್ರಕರಣದ ಅಪರಾಧಿ, ಕರೋಪಾಡಿಯ ಲಕ್ಷ್ಮಣ ನಾಯ್ಕಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ವಿನೋದಿನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಮೃತದೇಹವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದ. 2016ರ ಡಿ.23ಕ್ಕೆ ಸಂಜೆ ವೇಳೆ ವಿನೋದಿನಿಯವರ ಮನೆಗೆ ಬಂದು ಹೋಗಿದ್ದ  ಲಕ್ಷ್ಮಣ ನಾಯ್ಕನ್ನು ವಿಚಾರಿಸಿದಾಗ ತಾನೇ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದ.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅಪರಾಧಿಗೆ ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ.ದಂಡ, ದರೋಡೆಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

See also  ಭಾಷಾ ಸಂವಹನ, ಪುರಾಣ ಜ್ಞಾನವೃದ್ಧಿಗೆ ಯಕ್ಷಗಾನ ಸಹಕಾರಿ : ಜಯಂತ್ ಶೆಟ್ಟಿ
Share This Article