More

    ನಿರಂತರ ಪುಸ್ತಕ ಓದುವುದರಿಂದ ವೃದ್ಧಿಯಾಗಲಿದೆ ಜ್ಞಾನ: ಸುರೇಶ ಬನ್ನಿಮರದ

    ಹನುಮಸಾಗರ: ಜ್ಞಾನದ ಸಂಪತ್ತನ್ನು ಒತ್ತಾಯದಿಂದ ಕುಸಿದುಕೊಳ್ಳಲು, ಕಳ್ಳತನ ಮಾಡಲು ಸಾಧ್ಯವಿಲ್ಲ. ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ನಿರಂತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಸುರೇಶ ಬನ್ನಿಮರದ ಹೇಳಿದರು.

    ಸಮೀಪದ ಮಾವಿನಇಟಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗ್ರಂಥಾಲಯ ಮತ್ತು ಪ್ರಯೋಗಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.

    ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಬಹಳ ಉಪಯುಕ್ತ. ವಿಮಾ ಗ್ರಾಮವಾದ ಪ್ರಯುಕ್ತ ಆ ಹಣವನ್ನು ನಿಮ್ಮ ಶಾಲೆಗೆ ಗ್ರಂಥಾಲಯ ಮತ್ತು ಪ್ರಯೋಗಾಲಯ ನಿರ್ಮಿಸಲು ಸಾಧ್ಯವಾಗಿದೆ. ಮಕ್ಕಳು ಹೆಚ್ಚಿನ ಜ್ಞಾನ ಪಡೆಯುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಮುಖ್ಯ ಶಿಕ್ಷಕ ಖಾಜಾಹುಸೇನ್ ಒಂಟೆಳಿ ಮಾತನಾಡಿ, ಪುಸ್ತಕ ಮನುಷ್ಯನ ಮಿತ್ರ, ಜ್ಞಾನ ನೀಡುವ ಕಾಮಧೇನು, ವ್ಯಕ್ತಿತ್ವ ನಿರ್ಮಾಣದ ಹೆಬ್ಬಾಗಿಲು. ಜೀವನ ರೂಪಿಸುವ ಮಾರ್ಗದರ್ಶಕ. ನಾವು ಗ್ರಂಥಾಲಯದಲ್ಲಿ ಗಂಭೀರವಾಗಿ ಅಧ್ಯಯನ ಮಾಡಬೇಕು. ಬೇರೆಯವರಿಗೆ ತೊಂದರೆಯಾಗದಂತೆ ಇರಬೇಕು. ಗ್ರಂಥಾಲಯ ಮತ್ತು ಪ್ರಯೋಗಾಲಯದ ಪ್ರಯೋಜನ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದರು.

    ಎಸ್ಡಿಎಂಸಿ ಅಧ್ಯಕ್ಷ ಭರಮಗೌಡ ಗೌಡ್ರ, ವಿಮಾಧಿಕಾರಿ ಇಕ್ಬಾಲ್ ಸಾಗರ, ವಿಮಾ ವ್ಯವಸ್ಥಾಪಕ ಶಂಕ್ರಪ್ಪ, ಪ್ರತಿನಿಧಿಗಳಾದ ಪ್ರಾಣೇಶ ಪಪ್ಪು, ಗುರುರಾಜ ಸಿನ್ನೂರ, ಹನುಮಂತ ಮಾಟರಂಗಿ, ಪರಶುರಾಮ ವಾಲಿಕಾರ, ವೆಂಕಟೇಶ್ ಕರೇಕಲ್ಲ, ಗಂಗಮಾಳವ್ವ ಕರೇಕಲ್ಲ, ಕಸ್ತೂರಬಾಯಿ ಪವಾರ, ಹನುಮಂತಪ್ಪ ದಂಡಿನ, ಮಾನಪ್ಪ ಚವ್ಹಾಣ, ಮಂಜುನಾಥ ಕರೇಕಲ್ಲ, ಹನುಮಂತ ವಾಲಿಕಾರ, ಭರಮೇಶ ಚವ್ಹಾಣ, ಶಂಕ್ರಪ್ಪ ಪೂಜಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts