More

    ವಿದೇಶಿ ಷೇರು ಮಾರುಕಟ್ಟೆ ಪ್ರವೇಶಿಸಲಿದೆಯೇ ಎಲ್​ಐಸಿ?

    ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ)ದ ಷೇರುಗಳನ್ನು ವಿದೇಶಿ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರ ಎಲ್​ಐಸಿ ಷೇರುಗಳ ಆರಂಭಿಕ ಸಾರ್ವಜನಿಕ ಪ್ರಸ್ತಾವವನ್ನು (ಐಪಿಒ) ಘೋಷಿಸಿದೆ. ಇದರೊಂದಿಗೆ ಸಾರ್ವಜನಿಕ ವಲಯದ ವಿಮಾ ಕಂಪನಿಯಲ್ಲಿ ಹೂಡಿಕೆ ಹೆಚ್ಚಳ ಮಾಡಲು ಬಯಸಿದೆ.

    ಇದಕ್ಕಾಗಿ ಎಲ್​ಐಸಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಚಳಿಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿ ಸಂಸತ್​ನಲ್ಲಿ ಮಂಡನೆಯಾಗುವ ಸಾಧ್ಯತದೆ ಇದೆ. ಅಷ್ಟು ಹೊತ್ತಿಗೆ ಅಂತಾರಾಷ್ಟ್ರೀಯ ಷೇರುಪೇಟೆಗೆ ಐಪಿಒ ಬಿಡುಗಡೆಯಾಗುವ ನಿರೀಕ್ಷೆ ಇದೆ. ಎಲ್​ಐಸಿ ಷೇರು ಮಾರಾಟದ ಸಲಹೆಗಾರರನ್ನಾಗಿ ಡೆಲಾಯ್ಟ ಮತ್ತು ಸಿಬಿಐ ಕ್ಯಾಪಿಟಲ್ಸ್​ಗಳನ್ನು ಸರ್ಕಾರ ನೇಮಿಸಿದೆ. ಎಲ್​ಐಸಿ 11 ರಿಂದ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಷೇರು ಹೊಂದಿದೆ.

    ಇದನ್ನೂ ಓದಿ: ಆರ್.ಆರ್. ನಗರ ಉಪಚುನಾವಣೆಗೆ 31 ನೋಡಲ್ ಅಧಿಕಾರಿ, 70 ಸೆಕ್ಟರ್ ಅಧಿಕಾರಿಗಳ ನಿಯೋಜನೆ : ಮಾಧ್ಯಮ ಪ್ರಕಟಿತ ದೂರುಗಳಿದ್ದರೆ 24 ಗಂಟೆಯೊಳಗೆ ತನಿಖೆ

    ಇಷ್ಟೊಂದು ದೊಡ್ಡ ಮೊತ್ತ ಹೂಡಿಕೆ ಮಾಡುವಷ್ಟು ಸಾಮರ್ಥ್ಯ ದೇಶೀಯ ಕಂಪನಿಗಳಲ್ಲಿ ಇಲ್ಲ. ಆದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸರ್ಕಾರ ಹೋಗುತ್ತಿದೆ. ಶೇ.25 ಷೇರನ್ನು ಮಾರಾಟ ಮಾಡುವುದು ಸರ್ಕಾರದ ಉದ್ದೇಶವಾಗಿದ್ದರೂ ಆರಂಭದಲ್ಲಿ ಸಣ್ಣ ಪ್ರಮಾಣದ ಷೇರನ್ನು ಬಿಕರಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಸಿಕ್ಕಿದ್ದು 12% ರೈತರಿಗೆ ಮಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts