More

    ಲಯನ್ಸ್ ಸಂಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಿ

    ಕೆ.ಆರ್.ಪೇಟೆ: ಲಯನ್ಸ್ ಸಂಸ್ಥೆ ತನ್ನ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ನೀಡಲು ಭಗವಂತನ ರೂಪದಲ್ಲಿ ಮುಂದೆ ಬಂದಿದ್ದು ಈ ಅವಕಾಶಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಸಲಹೆ ನೀಡಿದರು.

    ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ಪರಂಪರೆ ಸಹಯೋಗದಲ್ಲಿ ವಾಕ್ ಮತ್ತು ಶ್ರವಣ ದೋಷ ಇರುವವರಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಲಯನ್ಸ್ ಸಂಸ್ಥೆಗೆ 106 ವರ್ಷಗಳ ಇತಿಹಾಸವಿದೆ. ಸೇವೆಯೇ ಪ್ರಮುಖ ಧ್ಯೇಯ ಎಂಬ ತತ್ವದಲ್ಲಿ ಲಯನ್ಸ್ ತಂಡ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಮಾಜಮುಖಿಯಾಗಿ ಸೇವಾ ಮನೋಭಾವ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಿಗೆ ಅಭಿನಂದನೆಗಳು. ಲಯನ್ಸ್ ಸಂಸ್ಥೆ ಸೇವೆಯನ್ನು ನೀಡಲು ಭಗವಂತನ ರೂಪದಲ್ಲಿ ಮುಂದೆ ಬಂದಿದ್ದು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಲಯನ್ಸ್ ಸಂಸ್ಥೆ ತನ್ನ ಕಾರ್ಯ ಚಟುವಟಿಕೆ ಮಾಡಲಿ ಎಂದು ಆಶಿಸಿದರು.

    ಸಮಾಜ ಸೇವಕ ಹಾಗೂ ಗುತ್ತಿಗೆದಾರ ಎ.ಆರ್.ರಘು ಮಾತನಾಡಿ, ಲಯನ್ಸ್ ಸಂಸ್ಥೆ ಅಕ್ಕಿಹೆಬ್ಬಾಳು ಹೋಬಳಿಯಲ್ಲಿ ತನ್ನ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ನೆರವೇರಿಸುತ್ತಿರುವುದು ಸಂತಸ. ಹಣ ಇದ್ದವರೆಲ್ಲರೂ ಸೇವೆ ಮಾಡಲು ಮುಂದೆ ಬರುವುದಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶ್ರವಣ ದೋಷ ಹಾಗೂ ವಾಕ್ ದೋಷ ಇರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. 200 ದೇಶಗಳಲ್ಲಿ ಲಯನ್ಸ್ ಸಂಸ್ಥೆ ಕೆಲಸ ಮಾಡುತ್ತಿದೆ. ಭಾರತದಂತಹ ಅಭಿವೃದ್ಧಿ ದೇಶದಲ್ಲಿ ಇಂತಹ ಸಂಸ್ಥೆಗಳು ಸಾರ್ವಜನಿಕರಿಗೆ ಆರೋಗ್ಯದ ಕಾಳಜಿಯಿಟ್ಟು ಮಾಡುತ್ತಿರುವ ಸೇವೆ ಅನನ್ಯವಾದುದು ಎಂದರು.

    ಮೈಸೂರು ಪರಂಪರೆ ಅಧ್ಯಕ್ಷ ಲಯನ್ ಬಿ.ಜೆ.ಮನು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜೆ.ಎಸ್. ಲಿಂಗರಾಜೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಜಿಪಂ ಮಾಜಿ ಉಪಾದ್ಯಕ್ಷ ಶ್ರೀನಿವಾಸನಾಯಕ್, ಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಲಯನ್ ಡಾ.ಎನ್.ಕೃಷ್ಣೇಗೌಡ, ಸಮನ್ವಯಾಧಿಕಾರಿ ಲಯನ್ ಶ್ರೀನಿವಾಸ್, ಲಯನ್ ಭಾಸ್ಕರ್, ಪ್ರಾಂತೀಯ ಅಧ್ಯಕ್ಷ ಲಯನ್ ರಮೇಶ್, ವಲಯ ಅಧ್ಯಕ್ಷ ಲಯನ್ ಪ್ರಕಾಶ್, ಪರಂಪರೆ ಕಾರ್ಯದರ್ಶಿ ಲಯನ್ ಮಾದೇಶ್, ಖಜಾಂಚಿ ಬಿ.ವಿ.ಶ್ರೀಧರ್, ಲಯನ್ ಜೆ.ಆರ್.ದಿನೇಶ್, ಲಯನ್ ಮುದ್ಲಾಪುರ ಹರೀಶ್, ಲಯನ್ ಎಂ.ಎಸ್.ಮಂಜು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts