More

    ಪ್ರವಾಸೋದ್ಯಮದಿಂದ ಅಂತರಗಂಗೆ ಬೆಟ್ಟ ಅಭಿವೃದ್ಧಿ ; ನಿಯೋಗಕ್ಕೆ ಜಿಲ್ಲಾಧಿಕಾರಿ ವೆಂಕಟ್​ರಾಜಾ ಭರವಸೆ

    ಕೋಲಾರ: ಅಂತರಗಂಗೆ ಬೆಟ್ಟವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವ ಸಂಬಂಧ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಸೇರಿ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ತೀಮಾರ್ನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೆಂಕಟ್​ರಾಜಾ ಹೇಳಿದರು.

    ಅಂತರಗಂಗೆ ಬೆಟ್ಟ ಸಂರಕ್ಷಣಾ ಸಮಿತಿಯ ನಿಯೋಗ ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಬೆಟ್ಟದ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅರಣ್ಯ ಇಲಾಖೆ ರ್ನಿಲಕ್ಷ$್ಯ ವಹಿಸಿರುವುದರಿಂದ ಡಿಸಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಿ ಕಾಯಕಲ್ಪ ನೀಡುವಂತೆ ಮನವಿ ಮಾಡಿತು.

    ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಬೆಟ್ಟದ ಬಗ್ಗೆ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ಪರಿಸರದ ಬಗ್ಗೆ ನಿಯೋಗಕ್ಕೆ ಇರುವ ಕಾಳಜಿ ಪ್ರಶಂಸನೀಯ. ನಿಮ್ಮನ್ನು ಬಳಸಿಕೊಂಡು ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವೆ. ಬೆಟ್ಟದಲ್ಲಿ ಪುಂಡರ ಹಾವಳಿ, ಬೆಂಕಿ ಅವಘಡ ತಪ್ಪಿಸಲು ಎಸ್ಪಿಯೊಂದಿಗೆ ಚರ್ಚಿಸಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲು ತಿಳಿಸುವೆ. ಅರಣ್ಯ ಇಲಾಖೆ, ಪರಿಸರ, ಮುಜರಾಯಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸತಿ ಇಲಾಖೆ, ನಗರಸಭೆ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲಿನಕ್ಷೆ ತಯಾರಿಸಿದ ಬಳಿಕ ಸಂಸದರು, ಸ್ಥಳಿಯ ಶಾಸಕರು ಹಾಗೂ ಎಂಎಲ್​ಸಿಗಳೊಂದಿಗೆ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

    ಸಮಿತಿ ಮಾರ್ಗದರ್ಶಕ ಪಾ.ಶ್ರೀ.ಅನಂತರಾಮ್​, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಅಧ್ಯಕ್ಷ ಪ್ರವಿಣ್​ ಕುಮಾರ್​, ಪರ್ಯಾವರಣ ಸಂರಕ್ಷಣಾ ಗತಿವಿಧಿ ಜಿಲ್ಲಾ ಸಂಚಾಲಕ ಮಹೇಶ್​ರಾವ್​ ಕದಂ, ಸ್ವರ್ಣಭೂಮಿ ಫೌಂಡೇಷನ್​ ಅಧ್ಯಕ್ಷ ಶಿವಕುಮಾರ್​, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್​, ಮನ್ವಂತರ ಪ್ರಕಾಶನದ ಪ್ರಧಾನ ಸಂಚಾಲಕ ಎಸ್​.ಮಂಜುನಾಥ್​, ಖಜಾಂಚಿ ಎಸ್​.ಎನ್​.ಪ್ರಕಾಶ್​, ಜಿಲ್ಲಾ ಸಹಕಾರಿ ಯೂನಿಯನ್​ ನಿರ್ದೇಶಕಿ ಅರುಣಮ್ಮ, ರೈತ ಸಂಘದ ಎ.ನಳಿನಿ, ಸಮಿತಿ ಮುಖಂಡರು ಇದ್ದರು.

    ಬೈಕ್​ ರ್ಯಾಲಿ ರದ್ದು: ಹಿಜಾಬ್​ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್​ ವಜಾಗೊಳಿಸಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ 144ನೇ ಸೆಕ್ಷನ್​ ಜಾರಿಗೊಳಿಸಿರುವುದರಿಂದ ಕೋಲಾರದ ಗಾಂಧಿವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಳ್ಳಲು ಉದ್ದೇಶಿಸಿದ ಬೈಕ್​ ರ್ಯಾಲಿ ರದ್ದುಪಡಿಸಿ, ಸಮಿತಿಯ ಕೆಲವು ಮುಖಂಡರು ನಿಯೋಗ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts