More

    ಯರಗೋಳ್​ ನೀರು ಎಲ್ಲೆಂದರಲ್ಲಿ ಪೋಲು…!

    ಕಿರುವಾರ ಎಸ್​.ಸುದರ್ಶನ್​ ಕೋಲಾರ
    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್​ ಸಮೀಪದ ಮಾರ್ಕಂಡೇಯ ನದಿ ನೀರು ತಮಿಳುನಾಡಿಗೆ ಹರಿದು ವ್ಯರ್ಥವಾಗುವುದನ್ನು ತಡೆದು ಬಂಗಾರಪೇಟೆ ಪಟ್ಟಣ, ಕೋಲಾರ ನಗರ ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯರಗೋಳ್​ ಡ್ಯಾಂ ಯೋಜನೆಯು ಹಳ್ಳಹಿಡಿಯುತ್ತಿದ್ದು, ಅಸಮರ್ಪಕ ಪೈಪ್​ಲೈನ್​ ಕಾಮಗಾರಿಯಿಂದ ಎಲ್ಲೆಂದರಲ್ಲಿ ಯೋಜನೆಯ ನೀರು ಪೋಲಾಗುತ್ತಿದೆ.

    ಡ್ಯಾಂ ನಿರ್ಮಾಣಕ್ಕೂ ಮೊದಲೇ ಪೈಪ್​ಲೈನ್​ ಕಾಮಗಾರಿ:
    ಡ್ಯಾಂ ನಿರ್ಮಾಣಕ್ಕೂ ಮೊದಲೇ ಪೈಪ್​ಲೈನ್​ ಅಳವಡಿಸಿದ್ದ ಪರಿಣಾಮ ಸುಮಾರು ಕಡೆ ಪೈಪ್​ಲೈನ್​ಗಳಿಗೆ ಹಾನಿಯಾಗಿವೆ. ಇದರಿಂದ ಬಂಗಾರಪೇಟೆ ಹೊರತು ಪಡಿಸಿದರೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕೋಲಾರ ನಗರದಲ್ಲಿ ಪೈಪ್​ಲೈನ್​ ಕಾಮಗಾರಿ ಪರಿಶೀಲನೆ ಜವಾಬ್ದಾರಿ ವಹಿಸಿಕೊಂಡಿರುವ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ನೀರು ಪೋಲಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಕೋಲಾರದಲ್ಲಿನ ಓವರ್​ ಹೆಡ್​ ಟ್ಯಾಂಕ್​ಗಳಿಗೆ ನೀರು ತುಂಬಿಸಿ ಪೈಪ್​ಲೈನ್​ ಮೂಲಕ ಮನೆಗಳಿಗೆ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆಯಾದರೂ ನಗರದಲ್ಲಿ ಈಗಾಗಲೇ ಅಳವಡಿಸಿರುವ ಪೈಪ್​ಲೈಪ್​ ಬಹುತೇಕ ಕಡೆ ಹಾನಿಯಾಗಿದೆ. ಯರಗೋಳ್​ ಯೋಜನೆಯಡಿ ಆಯ್ದ ಭಾಗಗಳಲ್ಲಿ ಪೈಪ್​ಲೈನ್​ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ನಗರದಲ್ಲಿ ಒಟ್ಟು 9 ಓವರ್​ ಹೆಡ್​ ಟ್ಯಾಂಕ್​ಮೂಲಕ ನೀರು ಹರಿಸಲು ಕ್ರಮವಹಿಸಿದ್ದು, 6 ಟ್ಯಾಂಕ್​ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು 3 ಟ್ಯಾಂಕ್​ಗಳ ಕಾಮಗಾರಿ ಪ್ರಗತಿಯಲ್ಲಿದೆ. ಸಮರ್ಪಕವಾಗಿ ಪೈಪ್​ಲೈನ್​ ಇರುವ ವಾರ್ಡ್​ಗಳಿಗೆ ಯರಗೋಳ್​ ನೀರು ಸರಬರಾಜು ಮಾಡುತ್ತಿಲ್ಲ, ನಗರಸಭೆ ಹಾಗೂ ನಗರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಶಾಸಕರು ಹೇಳಿದ ಹಾಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯರೇ ಆರೋಪಿಸುತ್ತಿದ್ದಾರೆ.

    ಕಾಮಗಾರಿಯೂ ಕುಂಟುತ್ತಾ ಸಾಗಿತ್ತು!
    2008ರಲ್ಲಿ ಅಂದಿನ ಜೆಡಿಎಸ್​&ಬಿಜೆಪಿ ಸಮ್ಮಿಶ್ರ ಸರ್ಕಾರವು ಮಾರ್ಕಂಡೇಯ ನದಿಗೆ ಯರಗೋಳ್​ ಡ್ಯಾಂ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿ, 315 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ, ಯೋಜನೆಯನ್ನು ಕೈಗೆತ್ತಿಕೊಂಡಿತು. ಆದರೆ ಕಾಮಗಾರಿಯು ಕುಂಟುತ್ತಾ ಸಾಗುತ್ತಿತ್ತು, ಈ ಹಿಂದಿನ ಶಾಸಕ ಕೆ.ಶ್ರೀನಿವಾಸಗೌಡ ಅವರು ಅಧಿಕಾರಿಗಳು, ಗುತ್ತಿಗೆದಾರನ್ನು ಬೆಂಡೆತ್ತಿ ಕಾಮಗಾರಿಗೆ ವೇಗ ನೀಡಿದರು. ಜತೆಗೆ ಅಗಾಗ ಸ್ಥಳ ಭೇಟಿ ಮಾಡಿ ಯೋಜನೆ ಪೂರ್ಣಗೊಳ್ಳಲು ಕಾರಣೀಭೂತರಾದರು. ಆನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ, 2023ರ ನ.11ರಂದು ಡ್ಯಾಂ ಉದ್ಘಾಟಿಸುವ ಮೂಲಕ ದಶಕಗಳ ಬಳಿಕ ಜನರ ಬಹುವರ್ಷಗಳ ಕನಸು ನನಸು ಮಾಡಿದರು. ಆದರೆ ಯೋಜನೆಯ ಉದ್ದೇಶದಂತೆ ಕೋಲಾರ ನಗರದ ನಿವಾಸಿಗಳಿಗೆ ನೀರು ಲಭ್ಯವಾಗದಿರುವುದು ವಿಪರ್ಯಾಸ.

    • 6 ತಿಂಗಳಾದರೂ ನೀರು ಲಭ್ಯವಿಲ್ಲ
      ಯರಗೋಳ್​ ಯೋಜನೆ ಜಲಾಶಯ ಉದ್ಘಾಟನೆಯಾಗಿ 6 ತಿಂಗಳು ಕಳೆದಿವೆ. ಬರಗಾಲದಲ್ಲಿ ನೀರಿಗೇನು ಬರ ಎದುರಾಗುವುದಿಲ್ಲ ಎಂಬ ಜನರ ನಿರೀೆಯು ಹುಸಿಯಾಯಿತು. ಕೋಲಾರದಲ್ಲಿ ಪೈಪ್​ಲೈನ್​ ಕಾಮಗಾರಿ ಅಪೂರ್ಣಗೊಂಡಿರುವ ಕಾರಣ ಸಬರಾಜು ಆಗುವ ನೀರು ಓವರ್​ಹೆಡ್​ ಟ್ಯಾಂಕ್​ ಸಮೀಪ, ಪೈಪ್​ಲೈನ್​ ಹಾನಿಯಾಗಿ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ವಾಟ್ಸ್​ ಆ್ಯಪ್​, ೇಸ್​ಬುಕ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ರೀತಿ ಕ್ರಮಕೈಗೊಳ್ಳುತ್ತಿಲ್ಲ.
    • ನೀರು ಸರಬರಾಜಿನಲ್ಲೂ ರಾಜಕೀಯ
      ಯೋಜನೆಯ ಪೈಪ್​ಲೈನ್​ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ನಗರಸಭೆಗೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ವಾರ್ಡ್​ಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ. ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ವಾರ್ಡ್​ಗಳಿಗೆ ಹೆಚ್ಚಾಗಿ ನೀರು ಬಿಡಲಾಗುತ್ತಿದೆ. ನಾವು ಜನರ ಬಳಿ ಬೈಯಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳಿಗೆ ಈ ವಿಚಾರದ ಗಂಭೀರತೆಯಿಲ್ಲದಂತಾಗಿದೆ. ಕಾಮಗಾರಿ ನಿರ್ವಹಣೆಯು ನಗರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇಲಾಖೆಯದ್ದಾಗಿದ್ದರೆ, ಮನೆಗಳಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿ ನಗರಸಭೆಯವರದಾಗಿರುತ್ತದೆ. ಆದರೆ ನಗರಸಭೆಯ ಅಧಿಕಾರಿಗಳು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದ ವಾರ್ಡ್​ಗಳಿಗೆ ಹೆಚ್ಚು ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ನಗರಸಭೆಯ ಕೆಲ ಸದಸ್ಯರೇ ಆರೋಪಿಸಿದ್ದಾರೆ. ಅಲ್ಲದೇ ಕೆಲ ವಾರ್ಡ್​ಗಳಿಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬರಗಾಲದಿಂದ ನೀರಿನ ಲಭ್ಯತೆ ಕಡಿಮೆ ಇದೆ. ಇದರಿಂದ ಪಂಪ್​ಹೌಸ್​ಗಳು ಸರಿಯಾಗಿ ಬಳಕೆಯಾಗುತ್ತಿಲ್ಲ. ಆದರೆ ವಾರ್ಡ್​ಗಳಲ್ಲಿ ಪೈಪ್​ಲೈನ್​ ವ್ಯವಸ್ಥೆ ಸರಿಯಾಗಿದ್ದು, ಪಂಪ್​ಹೌಸ್​ನಲ್ಲಿ ಯರಗೋಳ್​ ನೀರು ಶೇಖರಣೆ ಮಾಡಿ ಮನೆಗಳಿಗೆ ಸರಬರಾಜು ಮಾಡಬಹುದು. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾರೂ ಕ್ರಮವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತ್ತಿದ್ದಾರೆ.
    • ಎಲ್ಲೆಲ್ಲಿ ಸೋರಿಕೆ?
      ನಗರದ ಇಟಿಸಿಎಂ ವೃತ್ತ, ಕಾಲೇಜು ವೃತ್ತ, ಸರ್ವಜ್ಞ ಪಾರ್ಕ್​, ಡಬಲ್​ ಟ್ಯಾಂಕ್​ ಸಮೀಪ, ಕೋಟೆ ಬಡಾವಣೆಯಲ್ಲಿ ಯರಗೋಳ್​ ಯೋಜನೆ ನೀರು ವ್ಯರ್ಥವಾಗಿ ಹರಿಯುತ್ತಿರುವ ವಿಡಿಯೋ, ೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
    • ಕರೆ ಸ್ವೀಕರಿಸದ ಇಂಜನಿಯರ್​
      ಯರಗೋಳ್​ ನೀರು ಪೋಲಾಗುತ್ತಿದ್ದು, ಸಮಸ್ಯೆ ಏನಿರಬಹುದು ಎಂದು ವಿಚಾರಿಸಲು ನಗರ ಕುಡಿಯುವ ನೀರು ಸಬರಾಜು ಹಾಗೂ ಒಣ ಚರಂಡಿ ಮಂಡಳಿ ಇಂಜನಿಯರ್​ ದೂರವಾಣಿ ಸಂಖ್ಯೆಗೆ ವಿಜಯವಾಣಿ ದಿನಪತ್ರಿಕೆಯ ಜಿಲ್ಲಾಪ್ರತಿನಿಧಿಗಳು ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಸಮಸ್ಯೆಗೆ ಕಾರಣ ಕೇಳಲು ಕರೆ ಮಾಡಿದರೂ ಸ್ವೀಕರಿಸದ ಇಂಜನಿಯರ್​ಗಳು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.
    ಯರಗೋಳ್​ ನೀರು ಎಲ್ಲೆಂದರಲ್ಲಿ ಪೋಲು…!
    ಡ್ಯಾಂ ಉದ್ಘಾಟನೆಯಾಗಿದ್ದು, ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬ ನಿರೀೆಯಿತ್ತು, ಆದರೆ ಕಾಮಗಾರಿ ವಿಳಂಬವಾದ ಕಾರಣ ಜನರಿಗೆ ಯೋಜನೆ ನೀರು ಲಭ್ಯವಾಗಲಿಲ್ಲ. ಎಲ್ಲೆಂದರಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ತಡೆಯಬೇಕು. ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿರುವ ವಾರ್ಡ್​ಗಳನ್ನು ಅಧಿಕಾರಿಗಳು ರ್ನಿಲಸಿದ್ದಾರೆ. ನೀರು ಸರಬರಾಜಿನಲ್ಲಿ ಭೇದಭಾವ ಮಾಡುವುದನ್ನು ಬಿಡಬೇಕು.
    ರಾಕೇಶ್​, ನಗರಸಭೆ ಸದಸ್ಯ, ಕೋಲಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts