More

    ಐಪಿಎಲ್‌ ಆಯೋಜನೆಗಾಗಿ ಇಂಗ್ಲೆಂಡ್ ಮಾಜಿ ನಾಯಕ ಪೀಟರ್ಸೆನ್ ನೀಡಿದ ಸಲಹೆ ಏನು ಗೊತ್ತೇ?

    ನವದೆಹಲಿ: ವಿಶ್ವ ಕ್ರಿಕೆಟ್‌ನ ಶ್ರೀಮಂತ ಲೀಗ್ ಐಪಿಎಲ್ ನಡೆಯುವ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಬಾರದು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸೆನ್ ಸಲಹೆ ನೀಡಿದ್ದಾರೆ. ಪ್ರತಿಷ್ಠಿತ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲು ಇತರ ರಾಷ್ಟ್ರಗಳು ಸಹ ಸಹಕರಿಸಬೇಕು ಎಂದಿದ್ದಾರೆ. ಇಂಗ್ಲೆಂಡ್ ಆಟಗಾರರು ಜೂನ್ 2 ರಿಂದ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಬೇಕಿದೆ. ಇದರಿಂದ ಇಂಗ್ಲೆಂಡ್ ಆಟಗಾರರು, ಐಪಿಎಲ್ ಮುಕ್ತಾಯಕ್ಕೂ ಮುನ್ನವೇ ತವರಿಗೆ ತೆರಳಬೇಕಾಗಿರುವುದರಿಂದ ಗೊಂದಲಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ಮಗುವಿನ ಚಿಕಿತ್ಸೆಗೆ ನೆರವಾದ ಸ್ಟಾರ್ ಫುಟ್ ಬಾಲ್ ಆಟಗಾರನ ಕೋಪ..!

    ಇಂಗ್ಲೆಂಡ್ ಆಟಗಾರರು ರಾಷ್ಟ್ರೀಯ ತಂಡದ ಪರ ಆಡುವ ಸಲುವಾಗಿ ಐಪಿಎಲ್ ಬಿಟ್ಟು ಬರುವ ಅವಶ್ಯಕತೆಯಿಲ್ಲ ಎಂದು ಈಗಾಗಲೇ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ನಿರ್ದೇಶಕ ಆಶ್ಲೇ ಗಿಲ್ಸ್ ತಿಳಿಸಿದ್ದಾರೆ. ‘ಕ್ರಿಕೆಟ್ ಮಂಡಳಿಗಳು ಅರ್ಥೈಸಿಕೊಳ್ಳಬೇಕು. ಇಂಥ ದೊಡ್ಡ ಟೂರ್ನಿ ವೇಳೆ ಇತರ ಅಂತಾರಾಷ್ಟ್ರೀಯ ಸರಣಿಗಳನ್ನು ಆಯೋಜಿಸಬಾರದು’ ಎಂದು ಪೀಟರ್ಸೆನ್ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಟೆನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ..?

    ಈ ವರ್ಷ 14 ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇಂಗ್ಲೆಂಡ್ ನಿಗದಿತ ಓವರ್‌ಗಳ ತಂಡದ ನಾಯಕ ಇವೊಯಿನ್ ಮಾರ್ಗನ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೋ, ಮೊಯಿನ್ ಅಲಿ, ಸ್ಯಾಮ್ ಕರ‌್ರನ್, ಟಾಮ್ ಕರ‌್ರನ್, ಸ್ಯಾಮ್ ಬಿಲಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಡೇವಿಡ್ ಮಲನ್ ಕಣಕ್ಕಿಳಿಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts