More

    ಶಿಲ್ಪಿಗಳ ಕಲಾಪ್ರೌಢಿಮೆ ಅನಾವರಣಕ್ಕೆ ಸಿಗಲಿ ಸಹಕಾರ

    ಸಾಗರ: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬದುಕಿನ ಶ್ರೇಷ್ಠ ಧಾರ್ಮಿಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
    ನಗರದಲ್ಲಿ ಮಂಗಳವಾರ ಸಂಜೆ ಶೃಂಗೇರಿ ಶಂಕರಮಠ, ಸಂಕಲನ ಬಚ್ಚಗಾರು, ಜೋಶಿ ಫೌಂಡೇಷನ್ ಹಾಗೂ ವಿವಿಧ ಮಹಿಳಾ ಭಜನಾ ತಂಡಗಳ ಆಶ್ರಯದಲ್ಲಿ ಅಯೋಧ್ಯೆ ಶ್ರೀರಾಮ ವಿಗ್ರಹದ ಶಿಲ್ಪಿಗಳಲ್ಲಿ ಒಬ್ಬರಾದ ಗಣೇಶ್ ಭಟ್ಟ ಹಾಗೂ ತಂಡದ ಶಿಲ್ಪಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಗೌರವ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತನೆಗೆ ಕರ್ನಾಟಕದ ಇಬ್ಬರು ಶ್ರೇಷ್ಠ ಶಿಲ್ಪಿಗಳಿಗೆ ಅವಕಾಶ ಸಿಕ್ಕಿರುವುದು ನಮ್ಮಲ್ಲಿನ ಕಲಾವಂತಿಕೆಗೆ ಸಾಕ್ಷಿಯಾಗಿದೆ. ಗಣೇಶ್ ಭಟ್ ಅವರು ಸಾಗರದ ಜತೆ ನಿಕಟ ಸಂಪರ್ಕ ಇರಿಸಿಕೊಂಡು, ಇಲ್ಲಿಯೇ ಶಿಲ್ಪಕೆತ್ತನೆಯನ್ನು ಅಭ್ಯಾಸ ಮಾಡಿದ್ದಾರೆ. ಅವರು ತಮ್ಮ ತಂಡದ ಜತೆ ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವುದು ಸಾಗರಕ್ಕೆ ಹೆಮ್ಮೆ ತಂದಿದೆ. ಅಂತಹವರನ್ನು ಸನ್ಮಾನಿಸುವುದು ಶ್ರೇಷ್ಠ ಕೆಲಸವಾಗಿದೆ ಎಂದು ಹೇಳಿದರು.
    ಆಶಯ ಮಾತುಗಳನ್ನಾಡಿದ ಪತ್ರಕರ್ತ ದೀಪಕ್ ಸಾಗರ್, ಇಡೀ ದೇಶದಲ್ಲಿ ಬಾಲರಾಮನ ವಿಗ್ರಹ ರಚನೆ ಸವಾಲಿನ ಕೆಲಸವಾಗಿತ್ತು. ಒಟ್ಟು ವಿಗ್ರಹ ರಚನೆಗೆ ಅವಕಾಶ ನೀಡಿದ ಮೂರು ತಂಡಗಳಲ್ಲಿ ೨ ತಂಡಗಳನ್ನು ಕರ್ನಾಟಕದವರೇ ಮುನ್ನೆಡೆಸಿದರು ಎಂಬುದು ಹೆಮ್ಮೆಯ ಸಂಗತಿ. ಅಮರ ಶಿಲ್ಪಿ ಜಕ್ಕಣಚಾರಿಯ ಕೆಲಸವನ್ನು ನಾವು ಎಂದಿಗೂ ಮರೆಯುವಂತಿಲ್ಲ. ಕರ್ನಾಟಕ ದೇವಾಲಯಗಳಿಗೆ ನೀಡಿದ ಪ್ರಭೆ ವಿಶ್ವವಿಖ್ಯಾತವಾಗಿದೆ. ಅಲ್ಲದೆ ಮಲೆನಾಡಿನ ಹಿರಿಮೆ-ಗರಿಮೆಯನ್ನು ಎತ್ತಿಹಿಡಿದ ಗುಡಿಗಾರರ ಕಲಾವಂತಿಕೆಗೆ ಸಿಗಬೇಕಾದ ಮನ್ನಣೆ ಪ್ರಾಶಸ್ತ ್ಯ ದೊರಕಲಿಲ್ಲ ಎನ್ನುವ ನೋವು ಇದೆ. ಸರ್ಕಾರ ಕಲಾಕಾರರಿಗೆ ಶಿಲ್ಪಿಗಳಿಗೆ ಅವರ ಕಲಾ ಪ್ರೌಢಿಮೆ ಅನಾವರಣಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
    ನಿವೃತ್ತ ಪ್ರಾಚಾಂiÀið ಡಾ. ಜಿ.ಎಸ್.ಭಟ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆಗೆ ಅವಕಾಶ ಸಿಕ್ಕಿರುವುದು ಕಲಾವಿದರ ಬದುಕಿನ ಶ್ರೇಷ್ಠ ಕ್ಷಣಗಳಾಗಿರುತ್ತವೆ. ಗಣೇಶ್ ಭಟ್ ಮತ್ತವರ ತಂಡ ಏಳೆಂಟು ತಿಂಗಳು ಅಯೋಧ್ಯೆಯಲ್ಲಿದ್ದು ಶ್ರೀರಾಮನ ಮೂರ್ತಿ ಕೆತ್ತನೆ ಮಾಡಿದ್ದು ಅವರ ರಾಮನ ಮೂರ್ತಿ ಇನ್ನೊಂದು ಅಂತಸ್ತಿನಲ್ಲಿ ಪ್ರತಿಷ್ಠಾಪನೆಯಾಗುತ್ತದೆ. ಶಿಲ್ಪ ವಿದ್ಯೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಗಣೇಶ್ ಭಟ್ ಮತ್ತವರ ತಂಡ ಶಿಲ್ಪ ವಿದ್ಯೆಯನ್ನು ಕರಗತ ಮಾಡಿಕೊಂಡು ಬಾಲರಾಮನ ಮೂರ್ತಿ ಕೆತ್ತನೆ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದರು.
    ಶಿಲ್ಪಿಗಳಾದ ಗಣೇಶ್ ಭಟ್, ಹಾವೇರಿ ಮೌನೇಶ್ ಬಡಿಗೇರ್, ಜಯದತ್ತ ಆಚಾರ್ಯ, ಸಂದೀಪ್ ನಾಯ್ಕ್ ಇಡಗುಂಜಿ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣಾಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟಿ.ವಿ.ಪಾಂಡುರAಗ, ಎಂ.ಟಿ.ಗುAಡಪ್ಪ ಗೌಡ, ಶುಂಠಿ ಸತ್ಯನಾರಾಯಣ ಭಟ್, ಪ್ರಭಾ ವೆಂಕಟೇಶ, ಸರೋಜಮ್ಮ, ಮಾ.ಸ.ನಂಜುAಡಸ್ವಾಮಿ, ಕಸ್ತೂರಿ ಕೃಷ್ಣಮೂರ್ತಿ, ರಶ್ಮಿ ಹೆಗಡೆ, ಸೀಮಾ ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts