More

    ಎಳೆಯ ಮನಸ್ಸುಗಳಿಗೆ ಕವಿಗಳ ಪರಿಚಯವಾಗಲಿ

    ಕಿಕ್ಕೇರಿ : ಕನ್ನಡ ಕಾವ್ಯ ಲೋಕಕ್ಕೆ ಹೊಸದಾಗಿ ಶೋಭೆ ತಂದ ಧಾರವಾಡದ ಪ್ರೀತಿಯ ಅಜ್ಜ ದ.ರಾ.ಬೇಂದ್ರೆ ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ತಿಳಿಸಿದರು.

    ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಕರವೇ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದ.ರಾ. ಬೇಂದ್ರೆ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಎಳೆಯ ಮನಸ್ಸಿನಲ್ಲಿ ಕನ್ನಡ, ಕಾವ್ಯ, ಕವಿತೆ ರಚನೆಗೆ ಸ್ಫೂರ್ತಿ ತುಂಬುವ ಕೆಲಸವಾಗಲು ಮೊದಲು ಕವಿಗಳ ಪರಿಚಯವಾಗಬೇಕು. ಅವರ ಕವಿತೆಗಳನ್ನು ಹಾಡುವ ಕೆಲಸಕ್ಕೆ ಮನಸ್ಸನ್ನು ತೊಡಗಿಸಿದರೆ ಗುನುಗುತ್ತ ಕಾವ್ಯಲೋಕಕ್ಕೆ ಆಸಕ್ತಿ ತೋರುತ್ತಾರೆ ಎಂದರು.

    ಕವಿಗಳು ತಾವು ಅನುಭವಿಸಿದ ಕಷ್ಟಗಳನ್ನು ಕಾವ್ಯದಲ್ಲಿ ಎಳೆಯಾಗಿ ನೇಯ್ದಿದ್ದಾರೆ. ನಾಕು ತಂತಿ ಕವನ ಸಂಕಲನದಿಂದ ಜ್ಞಾನಪೀಠ ಪ್ರಶಸ್ತಿ ಪಡೆದು ಕನ್ನಡ ಸಾರಸ್ವತ ಲೋಕಕ್ಕೆ ಕಿರೀಟ ಮುಡಿಸಿದ್ದಾರೆ. ಇವರ ಗರಿ ಕವನ ಸಂಕಲನದ ನರಬಲಿ ಕವನ ಸ್ವಾತಂತ್ರ್ಯದ ಕಿಚ್ಚು ಎಬ್ಬಿಸಿ ಬ್ರಿಟಿಷರಿಗೆ ನಿದ್ರೆಗೆಡಿಸಿತು. ಪರಿಣಾಮ ಸೆರೆಮನೆ ವಾಸ ಅನುಭವಿಸಿ ಸ್ವಾತಂತ್ರ್ಯ ಹೋರಾಟಗಾರರಾದರು. ದಾರ್ಶನಿಕ ರಾಮಕೃಷ್ಣ ಪರಮಹಂಸ, ವಿವೇಕಾನಂದ, ರವೀಂದ್ರನಾಥ ಟ್ಯಾಗೋರ್, ಅರವಿಂದರ ತತ್ವಾದರ್ಶಗಳಿಗೆ ಪ್ರಭಾವಿತರಾಗಿ ದಾರ್ಶನಿಕ, ಧಾರ್ಮಿಕ ನೆಲೆಗಟ್ಟಿನಲ್ಲಿ ಸಂಸ್ಕಾರ ಯೋಗಿಗಳಾದರು ಎಂದು ನೆನೆದರು.
    ಕಾವ್ಯ ಶಬ್ಧ ಗಾರುಡಿಗರಾಗಿ ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ಬದುಕಿದರು. ಇವರ ‘ನಾನು ಬಡವಿ, ಆತ ಬಡವ’, ‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..’, ‘ಇಳಿದು ಬಾ ತಾಯಿ ಇಳಿದು ಬಾ..’ ಅತ್ಯಂತ ಜನಪ್ರಿಯ ಗೀತೆಗಳಾಗಿರುವುದು ನಾಡಿನ ಹೆಮ್ಮೆಯಾಗಿದೆ ಎಂದು ಸ್ಮರಿಸಿದರು.

    ಕಾರ್ಯಕ್ರಮದಲ್ಲಿ ಕವಿತಾ, ಶಾರದಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts