More

    ಜಾತಿ, ಧರ್ಮ ಮೀರಿದ ಸಾಧನೆ ನಮ್ಮದಾಗಲಿ

    ಹಿರೇಕೆರೂರ: ಭವಿಷ್ಯ ಭಾರತದ ಕನಸು ನನಸು ಮಾಡಲು ವಿದ್ಯಾರ್ಥಿಗಳು ಪಣತೊಡಬೇಕು. ಜಾತಿ, ಧರ್ಮ ಮೀರಿದ ಸಾಧನೆ ನಮ್ಮದಾಗಬೇಕು. ಆತ್ಮವಿಶ್ವಾಸದಿಂದ ಮುನ್ನಡೆದಾಗ ಏನನ್ನಾದರೂ ಸಾಧಿಸಬಹುದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು.
    ಪಟ್ಟಣದ ಸಿಇಒಎಸ್ ವಿದ್ಯಾಸಂಸ್ಥೆಯ ಬಿ.ಆರ್. ತಂಬಾಕದ ಎಂಕಾಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಂಕಾಂ ಪ್ರಥಮ ವರ್ಷದ ವಿದ್ಯಾಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಾಧನೆ ಮಾಡದಿದ್ದರೂ ತಂದೆ, ತಾಯಿ, ಗುರುಗಳಿಗೆ ಗೌರವ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದು ನಮ್ಮನ್ನು ಕೈಹಿಡಿದು ಮುನ್ನಡೆಸುತ್ತದೆ. ಇದರೊಂದಿಗೆ ಶಿಸ್ತು, ಸನ್ನಡತೆ, ಸನ್ಮಾರ್ಗ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ನಾವು ಉನ್ನತ ಮಟ್ಟಕ್ಕೆ ಏರಬಹುದು ಎಂದರು.
    ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದುಕೊಳ್ಳುವಾಗ ಶಿಕ್ಷಣ ಸಂಸ್ಥೆಗಳ ಲೋಪವನ್ನು ಕಡೆಗಣಿಸಿ, ಇರುವ ಶೈಕ್ಷಣಿಕ ವ್ಯವಸ್ಥೆಯಲ್ಲಿಯೇ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪವಿದ್ದಾಗ ಮಾತ್ರ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಪಾಟೀಲ ಹಾಗೂ ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಮಾತನಾಡಿದರು.
    ಬಿ.ಇಡಿ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಪಿ. ಹಳ್ಳೇರ, ಉಪನ್ಯಾಸಕರಾದ ಸಿ.ಆರ್. ದೂದೀಹಳ್ಳಿ, ನಾಗರಾಜ ಎಚ್.ಪಿ., ನವೀನ ಯಲಿಗಾರ, ಬಿ.ಎಸ್. ನಾಯ್ಕರ, ತ್ರಿವೇಣಿ ಕೋರಿ, ಕಿರಣ ಬಾಗಲರ, ಪಿ.ಎಂ. ವಿಜಯಕುಮಾರ, ಪ್ರವೀಣ ಕೂರ್ಗೆರ, ಪ್ರಿಯಾ ಇಂಡಿ, ಕವಿತಾ ಅಣಜಿ, ಇತರರಿದ್ದರು.
    ಪ್ರಾಂಶುಪಾಲ ಡಾ.ಎಸ್.ಬಿ. ಚನ್ನಗೌಡ್ರ, ಉಪನ್ಯಾಸಕ ಎಸ್.ಎಸ್. ಹುಲ್ಲಿನಕೊಪ್ಪ ಹಾಗೂ ವಿದ್ಯಾರ್ಥಿ ಸಂಘದ ಪ್ರತಿನಿಧಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts