More

    ಚಿಂತನೆ, ನಡೆ ನುಡಿಗಳು ಕೃತಿಗೆ ಬದ್ಧವಾಗಿರಲಿ

    ತೀರ್ಥಹಳ್ಳಿ: ರೋಟರಿ ಸದಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾವು ನಮ್ಮ ಚಿಂತನೆ, ಆಡುವ ಮಾತುಗಳು ಕೃತಿಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ರೋಟರಿ ಜಿಲ್ಲೆ ೩೧೮೨ರ ಡಿಜಿಇ ದೇವ್‌ಆನಂದ್ ಹೇಳಿದರು.

    ಪಟ್ಟಣದಲ್ಲಿ 2023-24 ನೇ ಸಾಲಿನ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್‌ನ ಪದಾಽಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಪದವಿ ಪ್ರದಾನ ನೆರವೇರಿಸಿ ಮಾತನಾಡಿ, ಯಶಸ್ವಿ ನಾಗರಿಕರಾಗಲು ಅನೇಕ ಅಡೆತಡೆಗಳು ಎದುರಾಗುವುದು ಸಾಮಾನ್ಯ. ನಮ್ಮ ನಡೆ ನುಡಿ, ವರ್ತನೆ ನ್ಯಾಯ ಸಮ್ಮತವೆ ಎಂಬುದರ ಕುರಿತು ಚಿಂತನೆ ನಡೆಸಬೇಕಿದೆ. ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸುತ್ತಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಸದ್ಭಾವನೆಯನ್ನೂ ಮೂಡಿಸಬೇಕು ಎಂದರು.
    ರೋಟರಿ ಅಧ್ಯಕ್ಷರಾಗಿ ಕೋಡ್ಲು ಭರತ್‌ಕುಮಾರ್, ಕಾರ್ಯದರ್ಶಿಯಾಗಿ ಪ್ರೊ. ಎಂ.ಆರ್.ಮAಜುನಾಥ್ ಅಽಕಾರ ಸ್ವೀಕರಿಸಿದರು. ಇನ್ನರ್‌ವ್ಹೀಲ್ ಅಧ್ಯಕ್ಷರಾಗಿ ವಾಣಿ ಗಣೇಶ್ ಹಾಗೂ ಕಾರ್ಯದರ್ಶಿಯಾಗಿ ಮೋಹಿನಿ ಹರೀಶ್ ಅವರಿಗೆ ಶಬರಿ ಕಡಿದಾಳ್ ಪದವಿ ಪ್ರದಾನ ಮಾಡಿದರು. ರವಿ ಕೋಟೋಜಿ, ಚಂದ್ರಪ್ಪ, ಮಾಜಿ ಅಧ್ಯಕ್ಷ ಮನೋಜ್‌ಕುಮಾರ್, ಕಾರ್ಯದರ್ಶಿ ಎಚ್.ಆರ್.ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts