More

    ದೇಶ ಕಟ್ಟಲು ಯುವಕರು ಶ್ರಮಿಸಲಿ

    ಹಿರೇಕೆರೂರ: ಸ್ವಾಮಿ ವಿವೇಕಾನಂದರ ಆಶಯದಂತೆ ಯುವಶಕ್ತಿ ಸಶಕ್ತವಾಗಿ ಬೆಳೆದು, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.


    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಮತ್ತು ಕರ್ನಾಟಕ ಯುವನಿಧಿ ಕಾರ್ಯಕ್ರಮಕ್ಕಾಗಿ ಶಿವಮೊಗ್ಗಕ್ಕೆ ಹೊರಟಿದ್ದ ಬಸ್​ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ಮಾತನಾಡಿ, ಯುವಕರು ಮಾನಸಿಕವಾಗಿ ಸದೃಢರಾಗುವುದರ ಜತೆಗೆ ಜೀವನ ಕೌಶಲಗಳನ್ನು ಅಳವಡಿಸಿಕೊಂಡರೆ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂದರು.


    ತಾಲೂಕು ಯುವನಿಧಿ ನೋಡಲ್ ಅಧಿಕಾರಿ ವಿನಾಯಕ ಜೋಶಿ, ತಹಸೀಲ್ದಾರ ಪ್ರಭಾಕರಗೌಡ ಎಚ್., ವಿನಯ ಪಾಟೀಲ, ಪ್ರಕಾಶ ಬಣಕಾರ ಇದ್ದರು.
    ಯುವ ದಿನಾಚರಣೆ ಕುರಿತು ಎನ್​ಎಸ್​ಎಸ್ ಕಾರ್ಯಕ್ರಮಾಧಿಕಾರಿ, ಪ್ರಾಧ್ಯಾಪಕಿ ಗೀತಾ. ಎಂ ಮಾತನಾಡಿದರು.

    ಪ್ರಾಧ್ಯಾಪಕರಾದ ಎಂ.ಬಿ. ಬದನಿಕಾಯಿ, ನವೀನ. ಎಂ., ರಾಮಚಂದ್ರಪ್ಪ ಬಿ.ಎಂ., ಹೇಮಾ ಯರಗುಂಟಿ, ಸುಜಾತ.ಕೆ., ಪ್ರಸನ್ನ ಕುಮಾರ ಜೆ., ಯತೀಶ್ ಎನ್.ಎ., ಶಿವಾನಂದ ಸಂಗಾಪುರ, ಅತಿಥಿ ಉಪನ್ಯಾಸಕರಾದ ಜಯಕುಮಾರ ಹುಲ್ಲಿನಕೊಪ್ಪ, ನಾಗರಾಜ ಎಚ್., ಕಾಂತೇಶ ಗೋಡಿಹಾಳ, ರಾಜು ಆರ್.ಎಲ್., ಪರಶುರಾಮ, ಬಸವರಾಜ ಮಾಗಳದ, ಸಿಬ್ಬಂದಿ ವಿ.ಜಿ.ಪಾಟೀಲ, ಬಸನಗೌಡ ಗೌಡರ, ವಿದ್ಯಾರ್ಥಿ ಕಾರ್ಯದರ್ಶಿ ಲಿಂಗರಾಜ ಇದ್ದರು.
    ಕೌಶಲ ಅಭಿವೃದ್ಧಿ ಸಂಚಾಲಕಿ ಹೇಮಲತಾ.ಕೆ., ಕಾಂತೇಶ ಗೋಡಿಹಾಳ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts