More

    ಯುವಜನತೆ ಆರೋಗ್ಯ ಕಾಪಾಡಿಕೊಳ್ಳಲಿ – ಶೋಭಾ ಖೇಬೋಜಿ ಸಲಹೆ

    ತೇರದಾಳ: ದೇಶದ ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಯುವಜನತೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಳಿಂಗಳಿ ಗ್ರಾಪಂ ಅಧ್ಯಕ್ಷೆ ಶೋಭಾ ಖೇಬೋಜಿ ಹೇಳಿದರು.

    ಸಮೀಪದ ಹಳಿಂಗಳಿ ಗ್ರಾಮ ಪಂಚಾಯಿತಿ ವತಿಯಿಂದ ಇದೇ ಮೊದಲ ಬಾರಿಗೆ ಪಟ್ಟಣದ ಅಹಿಂಸಾ ಶಾಲೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟದ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಅಹಿಂಸಾ ಶಾಲೆ ಚೇರ್ಮನ್ ಡಿ.ಆರ್.ಬಿರಾದಾರಪಾಟೀಲ ಸಸಿಗೆ ನಿರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರಮಾಣವಚನ ಬೋಧಿಸಲಾಯಿತು.

    ಪಿಕೆಪಿಎಸ್ ಅಧ್ಯಕ್ಷ ಮಗೆಪ್ಪ ದೇಸಾಯಿ, ಗ್ರಾಪಂ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ, ಹಿರಿಯರಾದ ರಾಯಪ್ಪ ತಿಮ್ಮನ್ನವರ, ಭೂಪಾಲ ಚಿನಗಿ, ವರ್ಧಮಾನ ಖೇಬೋಜಿ, ಗಂಗಪ್ಪ ಖಾನಗೊಂಡ, ಸುಕುಮಾರ ದಡ್ಡಿ, ಜಿನ್ನಪ್ಪ ಚೌಗಲಾ, ಎಂ.ಬಿ.ಯಲ್ಲಟ್ಟಿ, ಸುರೇಶ ತಿಮ್ಮನ್ನವರ, ಬಾಬು ಶಿರೂರ, ಸಿದ್ದು ಹನುಮನ್ನವರ, ಪಿ.ಎನ್.ದೇಸಾಯಿ, ಅಹಿಂಸಾ ಮುಖ್ಯಶಿಕ್ಷಕ ಆರ್.ಬಿ.ಬಾಬನ್ನವರ, ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಪಾಂಡುರಂಗ ಪತ್ತಾರ ಇತರರಿದ್ದರು.

    ಕ್ರೀಡಾಕೂಟದ ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ಎ.ಬಿ.ಬುಜಂಗ, ಎಚ್.ಬಿ.ಕಾಂಬಳೆ, ಸುರೇಶ ಗುರವ ಕಾರ್ಯನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts