More

    ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲಿ

    ಕೊಳ್ಳೇಗಾಲ: ಎಚ್.ಕೆ.ಟ್ರಸ್ಟ್, ಮರಿಯಾಲ ಬಸವ ರಾಜೇಂದ್ರ ರಕ್ತನಿಧಿ ಕೇಂದ್ರ ವತಿಯಿಂದ ಪಟ್ಟಣದ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ವಿಶ್ವಚೇತನ ಸಂಸ್ಥೆಯ ಸಂಯೋಜಕ ಜಗದೀಶ್, ರಕ್ತದಾನ ಜೀವ ಉಳಿಸುವ ಕಾರ್ಯವಾ ಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವುದರಿಂದ ಸಮಸ್ಯೆ ಆಗುವುದಿಲ್ಲ ಎಂದು ಕಿವಿಮಾತು ಹೇಳಿದರು.

    ಡಾ.ಮಂಜುನಾಯಕ್ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ನಿಂದ ದೂರ ಉಳಿಯಬಹುದು. ಜತೆಗೆ ದೇಹದಲ್ಲಿರುವ ಅಧಿಕ ಕ್ಯಾಲೊರಿಯನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ದೇಹದ ತೂಕವನ್ನೂ ಸಮತೋಲನ ದಲ್ಲಿಡುತ್ತದೆ. ದೇಹದಲ್ಲಿನ ಕೊಬ್ಬಿನಂಶ ಕಡಿಮೆ ಮಾಡಲು ರಕ್ತದಾನ ಸಹಾಯಕವಾಗಿದ್ದು, ಹೃದಯಾಘಾತ ತಡೆಯಲೂ ಇದು ಸಹಕಾರಿ ಎಂದು ತಿಳಿಸಿದರು.

    ವಿವೇಕಾನಂದ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಮಹದೇಶ್ವರ ಕೈಗಾರಿಕಾ ತರಬೇತಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಮರಿಯಾಲ ಬಸವ ರಾಜೇಂದ್ರ ರಕ್ತ ನಿಧಿ ಕೇಂದ್ರದ ನಿರ್ವಾಹಕಿ ರಜಿನಿ, ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರವೀಂದ್ರ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಭಾಸ್ಕರ್, ವಿವೇಕಾನಂದ ಕೈಗಾರಿಕಾ ತರಬೇತಿ ಸಂಸ್ಥೆಯ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts