More

    ವಿದ್ಯಾರ್ಥಿಗಳು ಕೌಶಲ ಹೆಚ್ಚಿಸಿಕೊಳ್ಳಲಿ

    ಅಥಣಿ ಗ್ರಾಮೀಣ: ಕೌಶಲ ತರಬೇತಿ ಪಡೆದವರಿಗೆ ಬೇಗ ಉದ್ಯೋಗ ಸಿಗುತ್ತದೆ ಎಂದು ತರಬೇತುದಾರ ರಾಮಲಿಂಗಪ್ಪ ಹೇಳಿದರು.

    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಮಹೇಂದ್ರ ನಾಂದಿ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಉದ್ಯೋಗ ಕೌಶಲ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.

    ತರಬೇತಿ ಪಡೆದ ಬಳಿಕ ಉದ್ಯಮಶೀಲ ಮನೋಭಾವ ಹೆಚ್ಚುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಸಿದ್ದರಾಮ ಯರನಾಳ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿನಿಯರು ಸಾವಿರಾರು ರೂ. ಖರ್ಚು ಮಾಡಿ ಪಟ್ಟಣ, ನಗರ ಪ್ರದೇಶಗಳಿಗೆ ಹೋಗಿ ಕೌಶಲ ತರಬೇತಿ ಪಡೆಯುವುದನ್ನು ತಪ್ಪಿಸಲು ಕಾಲೇಜಿನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.

    ಸಂಚಾಲಕ ಪ್ರೊ. ಪರಪ್ಪ ಮಗದುಮ್ಮ, ಡಾ. ಪ್ರಭಾಕರ ಖ್ಯಾಡಿ, ಕುಮಾರ ತಕತರಾವ, ಕಪಿಲ ಕಾಂಬಳೆ, ಮಹೇಶ ಮಡಿವಾಳಕರ, ರಿಯಾಜ್‌ಅಹಮ್ಮದ್ ದೇಗಿನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts