More

    ಹಾಳು ಬಿದ್ದ ನಾಗಾವಿಯ ಪುನಶ್ಚೇತನ ಕೆಲಸವಾಗಲಿ

    ಚಿತ್ತಾಪುರ: ಹಾಳು ಬಿದ್ದ ನಾಗಾವಿ ಕ್ಷೇತ್ರವನ್ನು ಪುನಶ್ಚೇತನ ಮಾಡುವುದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಹಿಂದಿನ ಗತವೈಭವವನ್ನು ಮರಳಿ ತರಬೇಕಿದೆ ಎಂದು ಕಾಳಗಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಆರ್.ಅಣ್ಣಾಸಾಗರ ಹೇಳಿದರು.

    ಅಕ್ಕಮಹಾದೇವಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ನಾಗಾವಿ ಗತ ವೈಭವ ವಿಶೇಷ ಉಪನ್ಯಾಸ ಹಾಗೂ 4ನೇ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷ ಲಿಂಗಪ್ಪ ಮಲ್ಕನ್ ಅವರ ಔತಣಕೂಟ ಸಮಾರಂಭದಲ್ಲಿ ಮಾತನಾಡಿ, ನಾಗಾವಿಯಲ್ಲಿನ ಪರಿಸರ, ಲಿಪಿ, ಕಲೆ, ಶಾಸನಗಳ ಸಂರಕ್ಷಣೆ ಅಗತ್ಯ. ಇಂದಿನ ಯುವ ಜನಾಂಗಕ್ಕೆ ಸ್ಥಳೀಯರ ಇತಿಹಾಸವನ್ನು ತಿಳಿಸಬೇಕು ಎಂದು ತಿಳಿಸಿದರು.

    ಕಸಾಪ ಗೌರವ ಸಲಹೆಗಾರ ನಾಗರೆಡ್ಡಿ ಪಾಟೀಲ್ ಕರದಾಳ, 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಲಿಂಗಪ್ಪ ಮಲ್ಕನ್, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಮಾತನಾಡಿದರು. ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಸೈಯ್ಯದ್ ಷಾಷಾವಲಿ ಉದ್ಘಾಟಿಸಿದರು.

    ಸಿಪಿಐ ಚಂದ್ರಶೇಖರ ತಿಗಡಿ, ಶಿಶು ಅಭಿವೃದ್ಧಿ ಅಧಿಕಾರಿ ಮಲ್ಲಣ್ಣ ದೇಸಾಯಿ, ಪ್ರಮುಖರಾದ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಭೀಮಣ್ಣ ಸಾಲಿ, ಚಂದ್ರಶೇಖರ ಕಾಶಿ, ಚಂದ್ರಶೇಖರ ಅವಂಟಿ, ನಾಗರಾಜ ಭಂಕಲಗಿ, ಶೀಲಾ ಕಾಶಿ, ಶರಣಗೌಡ ಮಾದ್ವಾರ್, ಲಿಂಗಾರೆಡ್ಡಿ ಶೇರಿ, ವೀರಣ್ಣ ಸುಲ್ತಾನಪುರ, ಮಹ್ಮದ್ ಇಬ್ರಾಹಿಂ, ದೇವಿಂದ್ರ ಕುಮಸಿ, ಆನಂದ ಕಲ್ಲಕ್, ಕರಣಕುಮಾರ ಅಲ್ಲೂರ, ನರಸಪ್ಪ ಚಿನ್ನಾಕಟ್ಟಿ, ಶ್ವೇತಾ ಪಾಟೀಲ್, ಪಂಚಾಕ್ಷರಿ ಪೂಜಾರಿ, ಸಿದ್ದಣ್ಣ ಕುಲಕುಂದಿ, ರಾಮಲಿಂಗ ಪ್ಯಾಟಿ, ಚಂದ್ರಶೇಖರ ನಿರಲಗಿ ಇತರರಿದ್ದರು.

    ವಿದ್ಯಾಶ್ರೀ ಪ್ರಾರ್ಥಿಸಿದರು. ಬಸಪ್ಪ ಯಂಬತ್ತನಾಳ ನಿರೂಪಣೆ ಮಾಡಿದರು. ರಾಮಣ್ಣ ಡೋಣಗಾಂವ್ ಸ್ವಾಗತಿಸಿದರು. ಕಾಶಿರಾಯ ಕಲಾಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts