ಕವಿತಾಳ: ಸಮಾಜ ತಿದ್ದುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಟಗಲ್ ಗ್ರಾಮದ ಪ್ರಮುಖ ವೆಂಕಟೇಶ ಪಾಟೀಲ್ ಹೇಳಿದರು.
ಮಕರ ಸಂಕ್ರಾಂತಿ ನಿಮಿತ್ತ ವಟಗಲ್‌ನಲ್ಲಿ ಜಗಜ್ಯೋತಿ ಬಸವೇಶ್ವರ ನವತರುಣ ನಾಟ್ಯ ಸಂಘದಿಂದ ಆಯೋಜಿಸಿದ್ದ ‘ತ್ಯಾಗದ ತೊಟ್ಟಿಲು’ ನಾಟಕ ಪ್ರದರ್ಶನ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಕಲಾವಿದರ ಅಭಿನಯ ಸಮಾಜದ ಮೇಲೆ ಪರಿಣಾಮ ಬೀರುವಂತಿರಬೇಕು. ನಾಟಕದಲ್ಲಿನ ಉತ್ತಮ ಅಂಶಗಳನ್ನು ಸಾರ್ವಜನಿಕರು ಅಳವಡಿಸಿಕೊಳ್ಳಬೇಕು. ಮೋಜು, ಮಸ್ತಿಗಳಿಂದ ದೂರವಿರಬೇಕು ಎಂದರು. ಕವಿ ಸಿದ್ದಲಿಂಗಯ್ಯಸ್ವಾಮಿ, ಹಿನ್ನೆಲೆ ಗಾಯಕ ಸಿದ್ದಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು.