More

    ಚನ್ನವೀರ ಶ್ರೀಗಳ ನುಡಿಯಂತೆ ಭಕ್ತರು ನಡೆಯಲಿ

    ಸವಣೂರ: ಲಿಂ. ನಿರಂಜನ ಸ್ವಾಮಿಗಳು ಹಾಕಿಕೊಟ್ಟಿರುವ ಭಾರತೀಯ ಸನಾತನ ಸಂಸ್ಕೃತಿಯನ್ನು ಚನ್ನವೀರ ಸ್ವಾಮೀಜಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ನುಡಿಯಂತೆ ಪ್ರತಿಯೊಬ್ಬ ಭಕ್ತರೂ ನಡೆದುಕೊಳ್ಳಬೇಕು ಎಂದು ಹೊಸರಿತ್ತಿ ಗುದ್ದಲೀಶ್ವರ ಮಠದ ಗುದ್ದಲೀಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ 45ನೇ ಜಾತ್ರಾ ಮಹೋತ್ಸವ, ಲಿಂ. ನಿರಂಜನ ಶ್ರೀಗಳ 14ನೇ ಪುಣ್ಯ ಸ್ಮರಣೋತ್ಸವ, ಸಾಮೂಹಿಕ ವಿವಾಹ ಹಾಗೂ ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಭಕ್ತಿ ಇದ್ದಲ್ಲಿ ಎಲ್ಲವೂ ಸಿದ್ಧಿಯಾಗಲು ಸಾಧ್ಯ. ಮನುಷ್ಯನನ್ನು ಸಂಪೂರ್ಣವಾಗಿ ಪ್ರಸನ್ನತೆ ಪಡಿಸುವುದೇ ಪ್ರಸಾದ. ಪ್ರಚಾರ ಬಯಸದೆ ತನ್ನ ನಿತ್ಯ ಕಾಯಕದಲ್ಲಿ ತೊಡಗಿಕೊಂಡು ಸಾಧನೆಗೆ ಮುಂದಾಗುವ ವ್ಯಕ್ತಿ ಖಂಡಿತವಾಗಿ ಯಶಸ್ಸು ಕಾಣಲು ಸಾಧ್ಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.

    ವಿರಕ್ತಮಠದ 45ನೇ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ 8 ನವ ದಂಪತಿ ನೂತನ ಜೀವನಕ್ಕೆ ಪದಾರ್ಪಣೆ ಮಾಡಿದರು. ಗುರುಕುಲದ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ, ಸಂಜೆ ಕಡುಬಿನೋತ್ಸವ, ವಿವಿಧ ವಾದ್ಯ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು.

    ಶ್ರೀ ಮಠದ ಚನ್ನವೀರ ಸ್ವಾಮೀಜಿ, ಹಿರೇಮಲ್ಲನಕೇರಿ ವಿರಕ್ತಮಠದ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹುಲ್ಯಾಳದ ಶ್ರೀದೇವಿತಾಯಿ ಹಿರೇಮಠ ನುಡಿನಮನ ಸಲ್ಲಿಸಿದರು.

    ವೀರಯ್ಯ ಹಿರೇಮಠ, ಚಂದ್ರು ಪತ್ತಾರ, ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಡಾ. ಚಂದ್ರು ಲಮಾಣಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಪ್ರಭುಗೌಡ ಬಿಷ್ಟನಗೌಡ್ರ, ಶ್ರೀಧರ ದೊಡ್ಡಮನಿ, ಪ್ರಸನ್ನ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಕೆ.ಎಸ್. ಇಟಗಿಮಠ ಹಾಗೂ ಪಿ.ಎಚ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts