More

    ಭಕ್ತಿ ಧರ್ಮ ಸಂಸ್ಕೃತಿ ನಮ್ಮ ಜೀವಾಳವಾಗಲಿ

    ಗುಳೇದಗುಡ್ಡ: ಭಕ್ತಿ ಧರ್ಮ ಸಂಸ್ಕೃತಿ ನಮ್ಮ ಜೀವಾಳವಾಗಬೇಕು. ಶಾಂತಿಯುತ ಬದುಕಿಗೆ ದಾರಿ ಮಾಡಿಕೊಳ್ಳಬೇಕು. ಗುರುವಿನ ಸ್ಮರಣೆ ಮಾಡಬೇಕು. ಗುಡಿ ಗುಂಡಾರದ ಸಂಸ್ಕೃತಿ ಇದ್ದವರು ಗುಡಿಗಳಿಗೆ ತೆರಳಿ, ನೆಮ್ಮದಿ ಬದುಕಿಗೆ ಮಠಗಳಿಗೆ ಬರಬೇಕು ಎಂದು ಮೂರು ಸಾವಿರ ಮಠದ ಡಾ. ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.

    ಪಟ್ಟಣದ ಮುರುಘಾಮಠದ ಶ್ರೀ ನೀಲಕಂಠ ಮಹಾಪೂಜ್ಯರ 24ನೇ ಪುಣ್ಯಸ್ಮರಣೋತ್ಸವದಂಗವಾಗಿ ಮುರುಘರಾಜೇಂದ್ರ ಶಿವಯೋಗಿಗಳ ಗದ್ದುಗೆಗೆ ಹಾಗೂ ನೀಲಕಂಠ ಗುರುಗಳ ರಜತ ಮೂರ್ತಿಗೆ ಮಹಾರುದ್ರಾಭಿಷೇಕ, ಭವ್ಯ ರಥೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಭಕ್ತರಿಗೆ ಜ್ಞಾನ, ಅನ್ನ ನೆರಳು ನೀಡುವುದು ಮಠಗಳ ಕೆಲಸ. ಲಿಂಗ ಪೂಜೆ ಸಂಸ್ಕೃತಿ ಸಂಸ್ಕಾರ ಕಲಿಸುತ್ತವೆ. ಮಠಗಳಲ್ಲಿ ಕಲಿತವರು ಸಾತ್ವಿಕವಾಗಿ ನಡೆದುಕೊಳ್ಳುತ್ತಾರೆ. ಯುವಕರಿಗೆ ಸಂಸ್ಕಾರ ಕೊಡಬೇಕು. ಜ್ಞಾನದ ಪಾರಮಾರ್ಥಿಕ ಸಾಧನೆ ಅವಶ್ಯ. ಜ್ಞಾನಬೋಧನೆ ಮಾಡಬೇಕು, ಸನ್ಮಾರ್ಗದಲ್ಲಿ ನಡೆಯಬೇಕು. ಮುರುಘಾಮಠ ಭಕ್ತರಿಗೆ ಕಾಮಧೇನು ಕಲ್ಪತರು ಇದ್ದ ಹಾಗೇ ಎಂದರು.

    ಗದಗ ತೊಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಶರಣ ಸಂಸ್ಕೃತಿ ಮಕ್ಕಳಿಗೆ ಆಧಾರ ಸ್ತಂಭವಾಗಬೇಕು. ಶಿಕ್ಷಣ, ಸಂಸ್ಕಾರ ಕಲಿಸಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಮಠ ಮಂದಿರದಲ್ಲಿ ಸಿಗುವ ಜ್ಞಾನ, ಆಧ್ಯಾತ್ಮಿಕತೆ, ಧರ್ಮ ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡುತ್ತದೆ ಎಂದು ಹೇಳಿದರು.

    ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಮರುಳಸಿದ್ಧಲಿಂಗ ಮಹಾಸ್ವಾಮಿಗಳು, ಶಿವಮೂರ್ತೆಶ್ವರಮಠದ ಶಾಂತವೀರ ಮಹಾಸ್ವಾಮಿಗಳು, ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು, ಪ್ರಭುಕುಮಾರ ಮಹಾಸ್ವಾಮಿಗಳು, ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಗುರುಬಸವ ದೇವರು, ಮೌನೇಶ್ವರ ಮಹಾಪುರುಷ, ಬಸವಾನಂದ ಶರಣರು, ಶರಣಮ್ಮ ತಾಯಿ, ಶಾಂತಕ್ಕನವರು ಸಾನ್ನಿಧ್ಯ ವಹಿಸಿದ್ದರು.

    ಮಾಜಿ ಶಾಸಕ ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಬನ್ನಿ, ಮುಖಂಡ ಎಂ.ಬಿ. ಹಂಗರಗಿ, ಮುತ್ತಣ್ಣ ಕಳ್ಳಿಗುಡ್ಡ, ಅಶೋಕ ಹೆಗಡೆ, ಪ್ರಕಾಶ ಮುರಗೋಡ, ಶಿವಾನಂದಯ್ಯ ಮಳ್ಳಿಮಠ, ವಿಶ್ವನಾಥ ಹಿರೇಮಠ, ಎಲ್.ಎಸ್. ಕುಂಬಾರ, ವಿರುಪಾಕ್ಷ ಚಿಕ್ಕಮಠ, ಮುತ್ತು ಮೊರಬದ, ಸುಧೀರ ಗುಡ್ಡದ, ಸಾಗರ ಕೊಕಾಟಿ, ಸಚಿನ ರಾಂಪೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts