More

    ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಲೋಪ ಸರಿಪಡಿಸಲಿ

    ಅರಸೀಕೆರೆ: ಅನುದಾನ ಹಂಚಿಕೆಯಲ್ಲಿ ಆಗಿರುವ ಲೋಪವನ್ನು ಜಿಲ್ಲಾಧಿಕಾರಿ ತಕ್ಷಣವೇ ಸರಿಪಡಿಸದಿದ್ದರೆ ಅರಸೀಕೆರೆ ನಗರಸಭೆ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸುವುದಾಗಿ ನಗರಸಭೆ ಸದಸ್ಯ ಸಿ.ಗಿರೀಶ್ ಹೇಳಿದರು.

    ನಗರಸಭೆ ಕಚೇರಿ ಮುಂಭಾಗ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಧಿಕಾರ ಪೂರ್ಣಗೊಂಡ ಒಂದೆರಡು ದಿನಗಳಲ್ಲಿ ಹದಿನೈದನೇ ಹಣಕಾಸು ಯೋಜನೆ ಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಂಡಿದ್ದಾರೆ. ಈ ಪೈಕಿ ಸುನ್ನಿಚೌಕ್, ಬಬಾಸಾಹೇಬ್ ಕಾಲನಿ, ಕಂತೇನಹಳ್ಳಿ, ಹೊಯ್ಸಳನಗರ, ಮಲ್ಲೇಶ್ವರ ನಗರ, ಸುಭಾಷ್‌ನಗರ, ಇಂದಿರಾ ನಗರ, ಪೇಟೆ ಬೀದಿ ಹಾಗೂ ಮಿನಿವಿಧಾನಸೌಧ ಬಡಾವಣೆ ಸೇರಿದಂತೆ ಒಟ್ಟು ಎಂಟು ವಾರ್ಡ್‌ಗಳಿಗೆ ಬಿಡಿಗಾಸಿನ ಅನುದಾನವನ್ನೂ ನೀಡದಿರುವುದು ದಾಖಲೆಗಳಿಂದ ಬಯಲಾಗಿದೆ. ಜಿಲ್ಲಾಧಿಕಾರಿ ತಕ್ಷಣವೇ ಪಟ್ಟಿ ಹಿಂಪಡೆದು ಏಳು ದಿನದಲ್ಲಿ ಅನುದಾನ ಸಮರ್ಪಕ ಹಂಚಿಕೆ ಮಾಡಬೇಕು. ಇಲ್ಲದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್ ಮಾತನಾಡಿ, ಜನರಿಂದ ಬಂದ ತೆರಿಗೆ ಹಣ ಜನಪರ ಕೆಲಸಗಳಿಗಾಗಿ ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಹಂಚಿಕೆಯಾಗಬೇಕು. ಕೆಲವರ ಮಾತು ಕೇಳಿ ಅಧಿಕಾರಿಗಳು ತಾರತಮ್ಯ ಮಾಡಬಾರದು ಎಂದರು.

    ಮುಖಂಡ ರಮೇಶ್ ನಾಯ್ಡು, ಹರ್ಷವರ್ಧನ್ ರಾಜ್, ರಾಘವೇಂದ್ರ, ಚಂದ್ರಶೇಖರ್, ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts