More

    ಸಹಕಾರಿಗಳು ಜನರ ಆರ್ಥಿಕ ಶಕ್ತಿಯಾಗಲಿ

    ಮೂಡಲಗಿ: ಕುರುಹಿನಶೆಟ್ಟಿ ಸೊಸೈಟಿ ಹತ್ತಾರು ಗ್ರಾಮಗಳ ಆರ್ಥಿಕ ಶಕ್ತಿಯಾಗಿ ಬೆಳೆಯುವಂತಹ ಎಲ್ಲ ಸಾಮರ್ಥ್ಯ ಹೊಂದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಸೊಸೈಟಿಗಳು ಸಮಾಜದ ಕಟ್ಟಕಡೆ ವ್ಯಕ್ತಿಗೆ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದರು.

    ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಸೊಸೈಟಿಯು ಷೇರುದಾರರ ಆರ್ಥಿಕ ಸಬಲೀಕರಣ ಮಾಡಲು ಎಲ್ಲ ತರಹದ ಸಾಲ ನೀಡುತ್ತಿರುವುದು ಶ್ಲಾಘನೀಯ ಎಂದರು. ಸೊಸೈಟಿ ಅಧ್ಯಕ್ಷ ಬಸವಣ್ಣಿ ಮುಗಳಖೋಡ ಮಾತನಾಡಿ, ಎಲ್ಲರ ಸಹಕಾರದಿಂದ ಸೊಸೈಟಿ 14 ಶಾಖೆ ಹೊಂದಿ ಪ್ರಗತಿಪಥದತ್ತ ಮುನ್ನಡೆಯುತ್ತಿದೆ ಎಂದರು.

    ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ ಶಿವಶಂಕರ ಶ್ರೀಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು, ಸದಲಗಾ ಶಿವಾನಂದ ಗೀತಾಶ್ರಮದ ಶ್ರದ್ಧಾನಂದ ಶ್ರೀಗಳು, ಅಸುಂಡಿ ಡಾ.ಶಿವಶರಣೆ ನೀಲಮ್ಮ ತಾಯಿ ಸಾನ್ನಿಧ್ಯ ವಹಿಸಿ ಸೊಸೈಟಿ ಸಾಧನೆ ಶ್ಲಾಸಿದರು.

    ಬಾಳಪ್ಪ ಬೆಳಕೂಡ, ಶಾಹೀನ್ ಅಖ್ತರ್, ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು. ಬೆಳ್ಳಿ ಸಂಭ್ರಮದ ನೆನಪಿಗೆ ಕುರುಹುಪಥ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ವರದಿ ಓದಿದರು. ಸುಭಾಷ ಢವಳೇಶ್ವರ, ವೆಂಕಟೇಶ ಸೋನವಾಲಕರ, ರವೀಂದ್ರ ಸೋನವಾಲಕರ, ಸುಭಾಷ ಸೋನವಾಲಕರ, ಸಂಜಯ ಹೊಸಮಠ, ಸಚಿನ ಖೋತ, ಲಕ್ಕಪ್ಪ ಪೂಜೇರಿ, ಸುಭಾಷ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವ ಬೊರಗಲ್, ಮಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಸಾಹಿತಿ ಬಾಲಶೇಖರ ಬಂದಿ, ಶೃತಿ ಗೋಕಾಕ, ಪ್ರಮೋದ ಯಲಬುರ್ಗಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts