More

    ಪೌರ ಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

    ಸವಣೂರ: ನಗರದ ಸ್ವಚ್ಛತೆಯ ರೂವಾರಿಗಳಾದ ಪೌರ ಕಾರ್ಮಿಕರು ದುಶ್ಚಟಗಳಿಂದ ದೂರ ಇರುವುದು ಅವಶ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ ಹೇಳಿದರು.

    ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
    ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ, ಉತ್ತಮ ಶಿಕ್ಷಣ ನೀಡುವ ಮೂಲಕ ಸಾಧಕರನ್ನಾಗಿಸಲು ಮುಂದಾಗಬೇಕು ಎಂದರು.
    ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಗಣೇಶ ಸವಣೂರ, ಪಿಐ ಆನಂದ ಒನಕುದರೆ ಅವರು ಪೌರ ಕಾರ್ಮಿಕರನ್ನು ಸನ್ಮಾನಿಸಿದರು.

    ಪುರಸಭೆ ವತಿಯಿಂದ 59 ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್, ತಹಸೀಲ್ದಾರ್ ಗಣೇಶ ಸವಣೂರ, ಪಿಐ ಆನಂದ ಒನಕುದರೆ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಮುಖ್ಯ ಇಂಜಿನಿಯರ್ ನಾಗರಾಜ ಮಿರ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಪಜಲಹ್ಮದಖಾನ್ ಪಠಾಣ ಅವರನ್ನು ಪೌರ ಕಾರ್ಮಿಕರ ವತಿಯಿಂದ ಸನ್ಮಾನಿಸಲಾಯಿತು.

    ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ ಮ್ಯಾಗಿನಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫಜಲಹ್ಮದಖಾನ್ ಪಠಾಣ, ಸದಸ್ಯರಾದ ಸೂಪಿಯಾ ಚುಡಿಗಾರ, ಅಯಿಷಾಪರಹಿನ್ ಚಂದುಬಾಯಿ, ಪೌರ ಕಾರ್ಮಿಕರ ಪ್ರಮುಖರಾದ ಚಂದ್ರಪ್ಪ ಮೈಲಮ್ಮನವರ, ಬಾಲಪ್ಪ ಮೈಲಮ್ಮನವರ, ಗೋಪಿ ಭಂಗಿ, ಗಿರಿಜವ್ವ ಬಾಲೇಹೊಸೂರ, ಮುಖ್ಯ ಇಂಜಿನಿಯರ್ ನಾಗರಾಜ ಮಿರ್ಜಿ, ಹಿರಿಯ ಆರೋಗ್ಯ ನಿರೀಕ್ಷಕ ಫಕೀರೇಶ ಬೂದಿಹಾಳ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts