More

    ಎರಡೂ ರಾಜ್ಯಗಳಿಂದ ಗಡಿ ಸರ್ವೇ ಆಗಲಿ

    ಚಿಂಚೋಳಿ: ವನ್ಯಜೀವಿ ಧಾಮದಲ್ಲಿನ ಜಲಪಾತ ಸೇರಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬೇಕು. ಗಡಿ ಸರ್ವೇಗೆ ತೆಲಂಗಾಣ, ಕರ್ನಾಟಕ ಸರ್ಕಾರ ಮುಂದಾಗಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿAದ ತಹಸಿಲ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಚಿಂಚೋಳಿ ತೆಲಂಗಾಣದ ಗಡಿಗೆ ಅಂಟಿಕೊAಡಿದ್ದು, ಇಲ್ಲಿಯವರೆಗೆ ಗಡಿ ಸರ್ವೇ ಮುಗಿದಿಲ್ಲ. ವನ್ಯಜೀವಿ ಧಾಮ ಘೋಷಣೆಯಾಗಿ ವರ್ಷಗಳೇ ಉರುಳುತ್ತಿದ್ದರೂ, ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಕೂಡಲೇ ಸರ್ಕಾರ ವನ್ಯಜೀವಿಧಾಮದಲ್ಲಿನ ಜಲಪಾತಗಳನ್ನು ಪ್ರವಾಸಿ ತಾಣವನ್ನಾಗಿ ರೂಪಿಸಬೇಕು. ಅರಣ್ಯದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿ ಗ್ರಾಮ ಪಂಚಾಯಿತಿಗೊAದು ತೊಗರಿ ಖರೀದಿ ಕೇಂದ್ರ ಸ್ಥಾಪಸಬೇಕು. ಕ್ವಿಂಟಾಲ್ ತೊಗರಿಗೆ ರಾಜ್ಯ ಸರ್ಕಾರ 1 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ಬೆಂಬಲ ಬೆಲೆ ಎಂಎಪಿ ಕಾನೂನು ಜಾರಿ ಮಾಡಬೇಕು. ಬೆಳೆ ವಿಮೆ ಹಣ ಕಟ್ಟಿದ ಎಲ್ಲ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬರ ಪರಿಹಾರ ಹಣ ಬಿಡುಗಡೆಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಿಂದ ನಡೆದಿದ್ದು, ಬಿಲ್ ತಡೆಹಿಡಿದು ಸಂಬAಧಿತರ ವಿರುದ್ಧ ಕ್ರಮ ಕೈಗೊಳ್ಲಬೇಕು ಎಂದು ಆಗ್ರಹಿಸಿದರು.

    ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಹಣಮಂತ ಪೂಜಾರಿ, ಜಾಫರ್‌ಖಾನ್ ಮಿರಿಯಾಣ, ದೀಲಿಪ್ ನಾಗೂರೆ, ಶಂಕ್ರಯ್ಯ ಸ್ವಾಮಿ, ಸಿದ್ದಲಿಂಗಯ್ಯ ಸ್ವಾಮಿ, ರೇವಣಸಿದ್ದಪ್ಪ ಮೋಘಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts