More

    ಮನದೊಳಗಿನ ಅಸ್ಪಶ್ಯತೆ ತೊಲಗಲಿ

    ವಿಜಯಪುರ: ಕೇವಲ ಕಾನೂನಿನಿಂದ ಅಸ್ಪಶ್ಯತೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಕೆಲವು ವ್ಯಕ್ತಿಗಳ ಮನಸಿನಲ್ಲಿ ಅಡಗಿರುವ ಅಸ್ಪಶ್ಯತೆ ಸಂಪೂರ್ಣ ನಶಿಸಿ ಹೋಗಬೇಕಿದೆ. ಆಗ ಮಾತ್ರ ಅಸ್ಪಶ್ಯತೆ ಸಂಪೂರ್ಣ ಮಟ್ಟ ಹಾಕಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ ಅರವಿಂದರಾವ ದೇಶಪಾಂಡೆ ತಿಳಿಸಿದರು.

    ಗರದ ಬಡೀ ಕಮಾನ್ ರಸ್ತೆಯಲ್ಲಿನ ಪದ್ಮಶ್ರೀ ಕಾಕಾ ಕಾರಖಾನೀಸ್ ಶಾಲೆ ಸಭಾಂಗಣದಲ್ಲಿ ಭಾನುವಾರ ಸಂಜೆ ಓದುಗರ ಚಾವಡಿ ಹಾಗೂ ಯುವ ಭಾರತ ಸಮಿತಿ ನೇತೃತ್ವದಲ್ಲಿ ನಡೆದ ಖ್ಯಾತ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ವಿರಚಿತ ‘ಕಾಕಾ ಕಾರಾಖಾನೀಸ್’ ಕೃತಿ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾಕಾ ಕಾರಖಾನೀಸ್ ಅವರು ಶ್ರೇಷ್ಠ ವ್ಯಕ್ತಿತ್ವದ ಆದರ್ಶ ವ್ಯಕ್ತಿಯಾಗಿದ್ದರು. ಮಹಾತ್ಮ ಗಾಂಧಿ ಅವರ ಪ್ರಭಾವಕ್ಕೊಳಗಾಗಿ ಶೋಷಿತರ ಕಲ್ಯಾಣದ ಕಾರ್ಯದಲ್ಲಿ ಸಕ್ರಿಯರಾದರು. ತಮ್ಮ ಸಮುದಾಯದ ವಿರೋಧದ ನಡುವೆಯೂ ಆದರ್ಶಗಳನ್ನು ಅನುಕ್ಷಣ ಪಾಲಿಸಿದ ದಲಿತರ, ದಮನಿತರ ಉದ್ದಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.

    ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಆಶೀರ್ವಚನ ನೀಡಿ, ಓದಿಗೆ ತಿಲಾಂಜಲಿ ನೀಡಿದವ ಬದುಕಿದ್ದೂ ಸತ್ತಂತೆಯೇ ಸರಿ. ಧರ್ಮ ಎಂದರೆ ಹಿಂದು-ಮುಸ್ಲಿಂ ಎಂಬುದಾಗಿ ಅರ್ಥೈಸುವುದು ಸರಿಯಲ್ಲ. ಮನುಷ್ಯನ ಒಳಗಿರುವ ಮನುಷ್ಯತ್ವ ಹಾಗೂ ಅಸಾಧಾರಣ ಗುಣವೇ ಧರ್ಮ. ಮನುಷ್ಯತ್ವವೇ ಧರ್ಮದ ಮೂಲ ಸಾರವಾಗಿದೆ ಎಂದರು.

    ಉಪನ್ಯಾಸಕ ಪ್ರೊ.ಯು.ಎನ್. ಕುಂಟೋಜಿ ಮಾತನಾಡಿ, ದಲಿತ ಮಕ್ಕಳ ಅನುಕೂಲಕ್ಕಾಗಿ ವಸತಿ ನಿಲಯ ಆರಂಭಿಸಿದ ಸಂದರ್ಭದಲ್ಲಿ ವ್ಯವಸ್ಥೆ ಅವರನ್ನು ಕಾಡಿತು. ಅನೇಕರು ಅವರನ್ನು ಅರ್ಧದಾರಿಗೆ ಬಿಟ್ಟು ಹೋದರೂ ಸಹ ಛಲ ಬಿಡಲಿಲ್ಲ. ಅನೇಕ ವಿರೋಧ ವ್ಯಕ್ತವಾದರೂ ಸಹ ತಮ್ಮ ಸಂಕಲ್ಪ ಬಿಡಲಿಲ್ಲ. ಸಮಾಜ ಕಟ್ಟುವ ಯಜಮಾನನಾಗಿ ಕಾರ್ಯನಿರ್ವಹಿಸಿದರು ಎಂದು ಸ್ಮರಿಸಿದರು.

    ಬಿಜೆಪಿ ಮುಖಂಡ ಉಮೇಶ ಕಾರಜೋಳ, ಹಿರಿಯ ಪತ್ರಕರ್ತ ವಾಸುದೇವ ಹೆರಕಲ್, ಕಾಕಾ ಕಾರಖಾನೀಸ್ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್.ಸಂಕದ, ಬಿ.ಆರ್.ಬನಸೋಡೆ, ಸುರೇಶ ಬಿರಾದಾರ, ಎಂ.ಬಿ.ಕಟ್ಟಿಮನಿ, ಸುನೀತಾ ಉಮರಾಣಿ, ರಮ್ಯಾ ಬಿರಾದಾರ, ವೈಶಾಲಿ ಬೀಳೂರ, ವಿಠ್ಠಲ ನಡುವಿನಕೇರಿ, ಬಸವರಾಜ ಯಾದವಾಡ, ಸವಿತಾ ಝಳಕಿ, ಎಂಎಸ್. ಮಾಗಣಗೇರಿ, ಸಾಗರ ಗಾಯಕವಾಡ, ಸತೀಶ್‌ಪಾಟೀಲ, ಕೇಶವ ಕುಲಕರ್ಣಿ, ಅನಿಲ ಮಾಶಾಳಕರ, ಶ್ರೀರಂಗ ಪುರಾಣಿಕ, ಸಂತೋಷ ಝಳಕಿ, ಶ್ರೀಷ ಹುಟಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts