More

    ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವ ಕೆಲಸವಾಗಲಿ

    ಚನ್ನರಾಯಪಟ್ಟಣ: ಗಿಡ ಮತ್ತು ಮರಗಳನ್ನು ಪೋಷಿಸದ ಮನುಷ್ಯನಿಗೆ ಭೂಮಿಯ ಮೇಲೆ ಬದುಕಲು ಹಾಗೂ ಸಾಯಲು ಅಧಿಕಾರವಿಲ್ಲ ಎಂದು ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಭೂಮಿ ಉಳಿಸಿ ಆಂದೋಲನ ಸಂಸ್ಥೆ ಹಾಗೂ ಶಾಲಿನಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಶಾಲಿನಿ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಸಿರು ಹಬ್ಬ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯ ಜೀವಿಸಲು ಗಿಡಮರಗಳು ಎಷ್ಟು ಅವಶ್ಯವೊ, ಮನುಷ್ಯ ಮರಣ ಹೊಂದಿದಾಗ ಮುಕ್ತಿ ಕಾರ್ಯಕ್ಕೂ ಮರಗಳು ಅಷ್ಟೇ ಅವಶ್ಯ ಎಂದರು.
    ಪೂರ್ವಿಕರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಜತೆಗೆ ಗಾಳಿ, ಬೆಳಕು, ನೆಲ, ಜಲವನ್ನು ಪೂಜಿಸುವ ಸಂಪ್ರದಾಯ ಅಳವಡಿಸಿಕೊಂಡಿದ್ದರು. ಇದರಿಂದ ಪರಿಸರ ಶುದ್ಧವಾಗಿತ್ತು. ಆದರೆ, ಇಂದು ಮನಷ್ಯನ ಅತಿ ಆಸೆಯಿಂದ ಪರಿಸರ ನಾಶವಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವಂತಹ ಕಾರ್ಯಗಳು ಆಗಬೇಕು ಎಂದು ಹೇಳಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಜಾಗತಿಕ ತಾಪಮಾನ, ಮಾಲಿನ್ಯ, ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಭೂಮಿ ವಿನಾಶದೆಡೆಗೆ ಸಾಗುತ್ತಿದೆ. ಆಧುನಿಕತೆ ಬೆಳೆದಂತೆ ಭೂಮಿ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸುವುದೊಂದೇ ಪ್ರಸ್ತುತ ಇರುವ ಮಾರ್ಗ ಎಂದರು.

    ವಿದ್ಯಾರ್ಥಿಗಳೇ ರಚಿಸಿರುವ ಶಾಲಿನಿ ಹೊಂಗಿರಣ ಕವನ ಸಂಕಲವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಬಿಡುಗಡೆ ಮಾಡಿದರು. ಪರಿಸರ ಪ್ರೇಮಿ ಚ.ನಾ.ಅಶೋಕ್ ಮಾತನಾಡಿದರು. ಬಳಿಕ 50,000ಕ್ಕೂ ಹೆಚ್ಚು ಹಣ್ಣು, ಹೂವು ಹಾಗೂ ಔಷಧ ಗಿಡಗಳನ್ನು ವಿತರಿಸಿದರು.

    ಶಾಲಿನಿ ವಿದ್ಯಾಸಂಸ್ಥೆ ಸಂಸ್ಥಾಪಕ ನಂಜುಂಡೇಗೌಡ, ಜಯಮ್ಮ ನಂಜುಂಡೇಗೌಡ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಪುರಸಭಾ ಸದಸ್ಯ ಸಿ.ಎನ್.ಶಶಿಧರ್, ಮುಖಂಡರಾದ ಕೃಷ್ಣ, ಅಶೋಕ್, ಮಹದೇವ್, ಜಗದೀಶ್, ಸಿದ್ದೇಶ್, ಗೋಕಾಕ್ ಪುಟ್ಟಣ್ಣ, ಮನೋಹರ್ ಸಿ.ಎನ್.ಶಶಿಧರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts