More

    ಸಹಕಾರ ಕ್ಷೇತ್ರದಲ್ಲಿ ಸೇವೆ ಮುಖ್ಯವಾಗಲಿ

    ಕಡೂರು: ಸಹಕಾರ ಕ್ಷೇತ್ರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡದೆ ಸೇವೆಗಾಗಿ ಬಳಿಸಿಕೊಂಡಾಗ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ತಿಳಿಸಿದರು.

    ಗುರುವಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಯಾವುದೇ ಸಹಕಾರ ಸಂಘದ ಪದಾಧಿಕಾರಿಗಳು ನೆಪ ಮಾತ್ರ. ಸದಸ್ಯರು ಮತ್ತು ಷೇರುದಾರರೇ ಸಂಘದ ಜೀವಾಳ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಸಲಹೆಯಂತೆ ಆಡಳಿತ ನಡೆಸಲಾಗುವುದು. ಸೊಸೈಟಿಯನ್ನು ಸಹಕಾರ ಬ್ಯಾಂಕ್ ಆಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
    ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, 115 ವರ್ಷಗಳ ಹಿಂದೆ ಆರಂಭವಾದ ಕಡೂರು ಟೌನ್ ಕೋ ಆಪರೇಟಿವ್ ಸೊಸೈಟಿ ಸಹಕಾರ ಬ್ಯಾಂಕ್ ಆಗಿ ಪರಿವರ್ತನೆ ಆಗಬೇಕಿತ್ತು. ಸಾಲ ಪಡೆದವರು ಸುಸ್ಥಿದಾರರಾಗದೆ ಸಕಾಲಕ್ಕೆ ಸಾಲ ಮರು ಪಾವತಿಸಿದರೆ ಸೊಸೈಟಿ ಅಭಿವೃದ್ಧಿ ಹೊಂದುತ್ತದೆ. ಸೊಸೈಟಿಗೆ ಯಾರೂ ಮಾಲೀಕರಿಲ್ಲ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಂಘದ ಸೇವಕರು ಎಂಬ ಭಾವನೆಯಿಂದ ಕೆಲಸ ಮಾಡಿದರೆ ಸಂಘ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎಂದು ಹೇಳಿದರು.
    ಪುರಸಭೆ ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದ ಕಡೂರು ಟೌನ್ ಕೋ ಆಪರೇಟಿವ್ ಸೊಸೈಟಿ ಲಕ್ಷ ರೂಪಾಯಿ ಲೆಕ್ಕದಲ್ಲಿ ಸಾಲ ಕೊಡುವ ಮಟ್ಟಕ್ಕೆ ಬೆಳೆದಿದೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣ ಮಾಡುತ್ತಿದೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ನಿರ್ದೇಶಕರು ಮತ್ತು ಷೇರುದಾದರರು ಹೆಗಲುಕೊಟ್ಟು ನಿಂತಾಗ ಮಾತ್ರ ಸಂಘದ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯಲು ಸಾಧ್ಯ ಎಂದರು.
    ನಿರ್ದೇಶಕರಾದ ಕೆ.ಜಿ.ಶ್ರೀನಿವಾಸ್‌ಮೂರ್ತಿ, ಕೆ.ಜಿ.ಲೋಕೇಶ್ವರ್, ಸುಶೀಲಾ, ಕೆ.ಕೆ.ಮಂಜು, ವಿ.ಎಂ.ಪ್ರಸಾದ್, ಅಜೇಯ್‌ಕುಮಾರ್ ಒಡೆಯರ್, ೈರೋಜ್ ಖಾನ್, ಕೆ.ಜಿ.ಪ್ರದೀಪ್, ಆರ್.ಚಂದ್ರಶೇಖರ್, ಸಲಹಾ ಸಮಿತಿ ನಿರ್ದೇಶಕರಾದ ಟಿ.ಆರ್.ರೇಣುಕಪ್ಪ, ಇಂದಿರಾ ಹೇಮರಾಜ್, ಉಪೇಂದ್ರನಾಥ್, ಬಿ.ಎಲ್.ಕುಮಾರ್, ಎನ್.ವೆಂಕಟೇಶ್, ಕೆ.ಎಂ.ನಾಗರಾಜ್, ಜಿಪಂ ಮಾಜಿ ಸದಸ್ಯರಾದ ಶರತ್ ಕೃಷ್ಣಮೂರ್ತಿ, ಕೆ.ಆರ್.ಮಹೇಶ್ ಒಡೆಯರ್, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಸೈಯಾದ್ ಇಕ್ಬಾಲ್, ಮುಖಂಡರಾದ ಕೆ.ಎಚ್.ಶಂಕರ್, ಯರದಕರೆರಾಜಪ್ಪ, ಎಚ್.ಎಂ.ರೇವಣ್ಣಯ್ಯ, ಜಿಗಣೇಹಳ್ಳಿ ನೀಲಕಂಠಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts