More

    ಉತ್ತಮ ಸಮಾಜಕ್ಕೆ ಅಯ್ಯಪ್ಪ ವ್ರತ ಆಚರಿಸಿ

    ಬಾಳೆಹೊನ್ನೂರು: ರಾಷ್ಟ್ರಾದ್ಯಂತ ವ್ಯಾಪಕವಾಗುತ್ತಿರುವ ಮತಾಂತರ ಪಿಡುಗಿಗೆ ಅಯ್ಯಪ್ಪಸ್ವಾಮಿ ವ್ರತಾಚರಣೆ ಸೂಕ್ತ ಮದ್ದು ಎಂದು ರೇಣುಕನಗರ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಹೇಳಿದರು.

    ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 31ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ, ಮಹಾ ಅನ್ನದಾನ ಕಾರ್ಯಕ್ರಮದ ಕರಪತ್ರವನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು.
    ಉತ್ತಮ ಸಮಾಜ ನಿರ್ಮಾಣಕ್ಕೆ ಅಯ್ಯಪ್ಪ ವ್ರತಾಚರಣೆಯಲ್ಲಿ ತೊಡಗಿಕೊಳ್ಳಬೇಕು. ಹಿಂದು ಸಮಾಜ ಕೇವಲ ತಮ್ಮ ಕುಟುಂಬ ಮತ್ತು ವೈಯಕ್ತಿಕ ವಿಚಾರಗಳಿಗೆ ಆದ್ಯತೆ ಕೊಟ್ಟು ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಕಡೆಗಣನೆ ಮಾಡಿದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ. ಹಾಗಾಗಿ ಹಿಂದು ಸಮಾಜದ ಹೆಚ್ಚು ಜನರು ಧಾರ್ಮಿಕ ಪ್ರಜ್ಞೆ ಬೆಳೆಸಿಕೊಂಡು ಇಂತಹ ಆಚರಣೆಗಳಲ್ಲಿ ತೊಡಗಿಕೊಳ್ಳಬೇಕು. ಸ್ವಸ್ಥ ಸಮಾಜಕ್ಕಾಗಿ, ಸಂಸ್ಕೃತಿ ರಕ್ಷಣೆಯಲ್ಲಿ ಅಯ್ಯಪ್ಪ ಸ್ವಾಮಿ ವ್ರತಾಚರಣೆ ಕೊಡುಗೆ ಅಪಾರ ಎಂದು ಹೇಳಿದರು.
    ಗುರುಸ್ವಾಮಿ ಎ.ಕೆ.ಪಿ.ಕೃಷ್ಣ ಪೊದುವಾಳ್, ಖಜಾಂಚಿ ಬಿ.ಜಗದೀಶ್ಚಂದ್ರ, ಮಾಲಾಧಾರಿಗಳಾದ ರವಿ, ಮಂಜು, ನಟರಾಜ, ಮನು, ಮದನ್, ಕೋಟಿ ರಮೇಶ್, ಚೇತನ್ ಆಚಾರ್ಯ, ನಾಗರಾಜ್, ಮಂಜುಸ್ವಾಮಿ, ಶರವಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts