More

    ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೂ ತಲುಪಲಿ

    ನಂದೇಶ್ವರ: ಸಂಸ್ಕೃತ ಭಾಷೆಯು ಎಲ್ಲ ಭಾಷೆಗಳ ತಾಯಿಯಾಗಿದೆ. ಸಂಸ್ಕೃತ ಭಾಷೆ ಕಲಿತವರ ಮನೆ ಸುಸಂಸ್ಕೃತವಾಗುತ್ತದೆ ಎಂದು ನಂದೇಶ್ವರ -ಮಧುರಖಂಡಿ ಸಿದ್ದಲಿಂಗೇಶ್ವರ ಕಮರಿಮಠದ ದುಂಡೇಶ್ವರ ಸ್ವಾಮೀಜಿ ಹೇಳಿದರು.

    ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಗ್ರಾಮದ ಚಿಕ್ಕ ಮಕ್ಕಳು, ಮಹಿಳೆಯರು ಪುರುಷರು ಸಂಸ್ಕೃತ ಚೆನ್ನಾಗಿ ಮಾತನಾಡುತ್ತಾರೆ. ಇದು ನಂದೇಶ್ವರ ಗ್ರಾಮದ ಸೌಭಾಗ್ಯವಾಗಿದೆ. ಸನಾತನ ಧರ್ಮ, ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

    ಶ್ರೀಮಠದಲ್ಲಿ ನಿರಂತರವಾಗಿ ಪ್ರತಿದಿನ ಸಂಜೆ ಉಚಿತ ಸಂಸ್ಕೃತ ತರಗತಿಗಳು ನಡೆಯುತ್ತಿವೆ. ಸಂಸ್ಕೃತ ಕಲಿಯುವ ಆಸಕ್ತಿ ಇರುವ ಪ್ರತಿಯೊಬ್ಬರೂ ತರಗತಿಗೆ ಹಾಜರಾಗಿ ಕಲಿಯಬಹುದಾಗಿದೆ ಎಂದರು. ಡಾ.ಶ್ರೀಶೈಲ ಚೌಗಲಾ, ಡಾ.ಪಿ.ಬಿ.ಬಾಗೇವಾಡಿ ಮಾತನಾಡಿದರು.

    ಆಧ್ಯಾತ್ಮಿಕ ಚಿಂತಕ ಪ್ರಭು ಪೂಜಾರಿ, ಮುಖ್ಯ ಶಿಕ್ಷಕಿ ಆರತಿ ಖೋತ, ಜಿ.ಟಿ.ಮಂಜುನಾಥ, ಮಹೇಶ ಹಿರೇಮಠ, ನಾಗೇಶ ಕೊಕಟನೂರ, ರಮೇಶ ಪಾಟೀಲ, ನಿಂಗಪ್ಪ ಬಬಲೇಶ್ವರ, ಸುಜಾತಾ ಕಶೆಟ್ಟಿ, ಶಿಲ್ಪಾ ಮುಧೋಳ, ರೇಣುಕಾ ಪೂಜಾರಿ ಇತರರಿದ್ದರು. ಜಿ.ಟಿ.ಮಂಜುನಾಥ ಸ್ವಾಗತಿಸಿದರು. ಆರತಿ ಖೋತ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts